ತುಮಕೂರು : ಸಿನಿಮಾವನ್ನೇ ಮೀರಿಸಿದ ಇಲಿಯ ಕಳ್ಳತನದ ಕಹಾನಿ ತುಮಕೂರಿನಲ್ಲಿ ವೈರಲ್ ಆಗಿದೆ. ತುಮಕೂರಿನ ಜ್ಯುವೆಲ್ಲರಿ ಶಾಪ್ನಲ್ಲಿ 10 ಲಕ್ಷ ಮೌಲ್ಯದ ವಜ್ರಾಭರಣ ನಾಪತ್ತೆಯಾಗಿದೆ. ಕಾಲ್ಟೆಕ್ಸ್ ಸರ್ಕಲ್ ಬಳಿಯ ವಿಶ್ವಾಸ್ ಜ್ಯುವೆಲರಿಯಲ್ಲಿ ವಿಚಿತ್ರ ಘಟನೆ ನಡೆದಿದೆ.
ಶಟರ್ ಮುರಿದಿಲ್ಲ, ಯಾರೂ ಒಳಪ್ರವೇಶಿಸಿಲ್ಲ, ಆದರೂ ಆಭರಣ ಮಾಯವಾಗಿದೆ. 50 ಗ್ರಾಂಗೂ ಅಧಿಕ ವಜ್ರ ಹಾಗೂ ಚಿನ್ನಾಭರಣ ಕಾಣೆಯಾಗಿದ್ದವು. ಸಿಸಿಟಿವಿ ಪರಿಶೀಲನೆ ವೇಳೆ ಮಾಲೀಕ ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಕಳ್ಳನಲ್ಲ, ಇಲಿಯೇ ಲಕ್ಷಾಂತರ ಮೌಲ್ಯದ ಆಭರಣ ಎಗರಿಸಿತ್ತು. ಸೈಲೆಂಟ್ ಆಗಿ ಶಾಪ್ಗೆ ನುಗ್ಗಿ 10 ರಿಂಗ್, 3 ಸರ ಇಲಿ ಕೊಂಡೊಯ್ದಿದೆ. ತನ್ನ ಬೀಲದಲ್ಲಿ 10 ಲಕ್ಷ ಮೌಲ್ಯದ ಆಭರಣವನ್ನು ಇಲಿ ಅಡಗಿಸಿಟ್ಟಿದೆ. ಇಲಿಯ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಾಡು ಹಿಡಿದು ಬಿಲ ತೋಡಿದ ಸಿಬ್ಬಂದಿಗೆ ವಜ್ರಾಭರಣ ಸಿಕ್ಕಿದೆ. ಆಭರಣ ವಾಪಸ್ ಸಿಕ್ಕ ಬಳಿಕ ಮಾಲೀಕ ನಿಟ್ಟುಸಿರು ಬಿಟ್ಟಿದ್ದಾನೆ.

