ತುಮಕೂರು: 12 ವರ್ಷದ ತಿಪಟೂರು ಮೂಲದ ಚಂದನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಳು. ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರೀಯವಾಗಿ ಕೊನೆಗೆ 7 ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದನ ತನ್ನ ಅಂಗಾಂಗ ದಾನ ಮಾಡುವ ಮೂಲಕ 6 ಜನರಿಗೆ ಬೆಳಕಾಗಿದ್ದಾಳೆ.
ಇಂದು ಆಕೆಯ ಅಂತ್ಯಕ್ರಿಯೆ ನೆರವೇರಲಿದ್ದು, ಸದ್ಯ ಚಂದನ ಮೃತದೇಹ ತಿಪಟೂರು ತಲುಪಿದೆ. ಚಂದನ ಪಾರ್ಥೀವ ಶರೀರವನ್ನು ಮೆರವಣಿಗೆ ಮಾಡುವ ಮೂಲಕ ಕೊಂಡೊಯ್ಯಲಾಗುತ್ತಿದೆ. ಮೆರವಣಿಗೆಯಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ.
ಚಂದನ ತಿಪಟೂರಿನ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಜು.23ರಂದು ಆಕೆಗೆ ಅಪಘಾತವಾಗಿತ್ತು. ಸ್ಕೂಲ್ ಮುಗಿಸಿ ವಾಪಸ್ ಬರುವಾಗ ತಿಪಟೂರಿನಲ್ಲಿ ಅಪಘಾತ ಸಂಭವಿಸಿತ್ತು

