ಶಿರಾ: ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ, ಬೆಂಕಿಯ ಮಧ್ಯೆ ಸಿಕ್ಕಿಹಾಕಿಕೊಂಡ ದನಗಳು ಪ್ರಾಣ ಕಳೆದುಕೊಂಡಿವೆ. ಎರಡು ಹಸುಗಳು ದಾರುಣವಾಗಿ ಮೃತಪಟ್ಟಿವೆ. ಶಿರಾ ತಾಲ್ಲೂಕಿನ ಶಿಡ್ಲೆಕೋಣ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಗ್ರಾಮದ ಮಂಜುನಾಥ್ ಅವರ ಸಂಬಂದಿಸಿದ ಶೆಡ್ ನಲ್ಲಿ 2 ಹಸುಗಳು 20 ಕೋಳಿಗಳು ಮತ್ತು ಇತರೆ ವಸ್ತುಗಳು ಆಕಸ್ಮಿಕ ಬೆಂಕಿಗೆ ಸುಟ್ಟ ಹೋಗಿದೆ.

ಕೊಟ್ಟಿಗೆಯಲ್ಲಿ ಎರಡು ಹಸುಗಳನ್ನು ಕಟ್ಟ ಹಾಕಲಾಗಿತ್ತು. ಅದೇ ಕೊಟ್ಟಿಗೆಯಲ್ಲಿ ಸುಮಾರು 20 ಕೋಳಿ ಸಾಕಾಣಿಕೆ ಮಾಡಲಾಗಿತ್ತು ಎನ್ನಲಾಗಿದೆ

ಸೋಮವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಆವರಿಸಿದ್ದು, ಎರಡು ಹಸುಗಳು ಸುಟ್ಟು ಕರಕಲಾಗಿವೆ. ಕೊಟ್ಟಿಗೆಯಲ್ಲಿದ್ದ ಸುಮಾರು ಹತ್ತು ಕೋಳಿ ಬೆಂಕಿಗಾಹುತಿ ಆಗಿದೆ. ಎಂದು ತಿಳಿದುಬರುತ್ತದೆ. ಸ್ಥಳಕ್ಕೆ ಪಶುವೈದ್ಯರ ತಂಡ ಹಾಗೂ ಕಳ್ಳಂಬೆಳ್ಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.