ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಆನೆಯೊಂದು ಮರಿಗೆ ಜನ್ಮ ನೀಡಿದ ವಿಶೇಷ ಕ್ಷಣವನ್ನು ಸಪಾರಿಗೆ ತೆರಳಿದ್ದ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಗಜಪ್ರಸವ ನೋಡಿದ ಪ್ರವಾಸಿಗರು ವಿಶೇಷ ಕ್ಷಣವನ್ನ ಆನಂದಿಸಿದ್ದಾರೆ, ಶುಕ್ರವಾರ ಸಪಾರಿಗೆ ತೆರಳಿದ್ದ ವೇಳೆ ಆನೆಯೊಂದು ಮರಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಸಾಮಾನ್ಯವಾಗಿ ಸಾಕು ಆನೆಗಳ ಪ್ರಸವವನ್ನ ನೋಡುತ್ತಿದ್ದ ಪ್ರವಾಸಿಗರು ದಟ್ಟ ಕಾನನದ ನಡುವೆ ಆನೆಯು ಮರಿಗೆ ಜನ್ಮ ನೀಡಿರುವುದನ್ನು ನೋಡಿ ಪುಳಕಿತರಾಗಿದ್ದಾರೆ.

