ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಯುವಕರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮಂಜೇಶ್ವರ  ಹೊಸಬೆಟ್ಟು ಸಸಿಹಿತ್ಲುವಿನ  ಗೌತಮ್ ರಾಜ್ ( 23) , ಕುಂಜತ್ತೂರು  ಮರಿಯಾಶ್ರಮ ಚರ್ಚ್ ಕಾಂಪೌಡ್ ನ ಬ್ರಾಯನ್ ಪಿಂಟೊ ( 20) ಮತ್ತು  ಮೊರತ್ತಣೆ ಕಜೆಕೋಡಿಯ  ಬಿ.ರಾಜೇಶ್ (39) ಮೃತ ಪಟ್ಟವರು.

ಉಡುಪಿಯಲ್ಲಿ ವಿಡಿಯೋ ಅನಿಮೇಟರ್ ಆಗಿ ದುಡಿಯುತ್ತಿದ್ದ  ಗೌತಮ್ ರಾಜ್   ಚಿಕ್ಕಮ್ಮನ ಮನೆಯಲ್ಲಿ   ತಾಯಿ ಜೊತೆ ಮಂಜೇಶ್ವರ ಹೊಸ ಬೆಟ್ಟು ನಲ್ಲಿರುವ  ಮನೆಯಲ್ಲಿ ವಾಸವಾಗಿದ್ದರು. ಎರಡು ತಿಂಗಳಿನಿಂದ ಉಡುಪಿಗೆ ಕೆಲಸಕ್ಕೆ ತೆರಳುತ್ತಿದ್ದ ಗೌತಮ್ ರಾಜ್ ಮಂಗಳವಾರ ಮನೆಯಲಿದ್ದು  ಮಧ್ಯಾಹ್ನ ಮನೆಯ  ಕೋಣೆಯಲ್ಲಿ  ಫ್ಯಾನಿಗೆ  ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ.

ನೆರೆಮನೆಯವರು ಸಹಾಯದಿಂದ ಆಸ್ಪತ್ರೆಗೆ ತಲಪಿಸಿ ದರೂ ಜೀವ ಉಳಿಸಲಾಗಿಲಿಲ್ಲ.   ಮಂಜೇಶ್ವರ ಮೊರತ್ತಣೆಯ ರಾಜೇಶ್ ( (40) ಮನೆ ಸಮೀಪದ ಮರ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಕ್ರೀಟ್ ಕಾರ್ಮಿಕ ರಾಗಿದ್ದರು. ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.   ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ . ಅಸೌಖ್ಯದಲ್ಲಿದ್ದ ರಾಜೇಶ್ ಬಳಿಕ ಚೇತರಿಸಿಕೊಂಡಿದ್ದರು.

ಕುಂಜ ತ್ತೂರಿನ ಬ್ರಾಯನ್  ಪಿಂಟೊ ಸೋಮವಾರ ರಾತ್ರಿ ಮನೆಯಿಂದ ಸ್ಕೂಟರ್ ನಲ್ಲಿ ತೆರಳಿದ್ದು,  ಬಳಿಕ ಮರಳಿ ಬಂದಿರ ಲಿಲ್ಲ   ಮಂಗಳವಾರ  ಬ್ರಾಯನ್ ನ ತರವಾಡು ಮನೆ ಬಳಿ ಸ್ಕೂಟರ್ ಪತ್ತೆ ಯಾಗಿದ್ದು, ಸಂಶಯ ಗೊಂಡು ಮನೆ ಯೊಳಗೆ ಗಮನಿಸಿದಾಗ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು .

ಮಂಜೇಶ್ವರ ಠಾಣಾ ಪೊಲೀಸರು ಮೂರೂ  ಪ್ರಕರಣ ಗಳ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆಕರಣ ಗಳ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ