ಬೆಂಗಳೂರು: ಪೊಲೀಸರನ್ನೇ ಸಾರ್ವಜನಿಕರು ಕಳ್ಳರೆಂದು ಅಟ್ಟಿಸಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಜೊತೆಗೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ಕೂಡ ಕೇಳಿಬಂದಿದೆ.
ಪ್ರಕರಣದ ವಿಡಿಯೋವನ್ನು ರಾತ್ರಿ ವೇಳೆ ಚಿತ್ರೀಕರಿಸಿದ್ದು, ವಿಡಿಯೋ ಚಿತ್ರೀಕರಣ ಮಾಡ್ತಿರುವ ವ್ಯಕ್ತಿಯ ಆಡಿಯೋ ಕೇಳಿಸುತ್ತದೆ. ಪೊಲೀಸ್ನವ.. ನೋಡಿ ಕಳ್ಳ.. ಕಲೆಕ್ಷನ್ ಮಾಡ್ತೈತೆ. ನಿಲ್ಸಿ ಸರ್.. ನಿಲ್ಸಿ ಸರ್.. ಸೈಡಿಗೆ ಹಾಕಿ.. ಎನ್ನುತ್ತಾನೆ.. ಆಗ ಹಿಂದಿನಿಂದ ಏಯ್ ಏಯ್ ಎಂಬ ಧ್ವನಿ ಕೇಳಿಬಂದಿದೆ.
ವಿಡಿಯೋ ಮಾಡ್ತಿರೋದು ಗೊತ್ತಾಗ್ತಿದ್ದಂತೆಯೇ.. ಏಯ್.. ಏಯ್.. ಓಡ್ದ.. ಓಡ್ದ.. ಕಳ್ಳ.. ಕಳ್ಳ.. ಎಂದು ಜೋರಾಗಿ ಕೋಗಿದ್ದಾರೆ. ಅಷ್ಟರೊಳಗೆ ಪೊಲೀಸ್ ವಾಹನ ಪರಾರಿ ಆಗಿದೆ. ಹೊಯ್ಸಳ ವಾಹನದಲ್ಲಿದ್ದ ಪೊಲೀಸರು ವಸೂಲಿ ಮಾಡ್ತಿದ್ದಾರೆ ವಿಡಿಯೋದಲ್ಲಿ ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಎ 02 ಜಿ 4664 ನಂಬರಿನ ವಾಹನವಾಗಿದ್ದು, ವಿಡಿಯೋ ಆಧರಿಸಿ ಸರ್ಕಾರ ವಸೂಲಿಗೆ ಇಳಿದಿದ್ದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

