ಸಕಲೇಶಪುರ: ಹಳ್ಳಿಬೈಲು ಗ್ರಾಮದಲ್ಲಿ ನಡೆದ ಘಟನೆ ಒಂದು ಸಿನಿಮಾ ದೃಶ್ಯಕ್ಕೇ ಸಾಟಿಯಾಯಿತು. ಒಂಟಿಸಲಗವೊಂದು ಬೃಹತ್ ಬೈನೆ ಮರವನ್ನು ನೆಲಕ್ಕುರುಳಿಸಿ ರಸ್ತೆ ತಡೆದು ವಾಹನ ಸವಾರರನ್ನು ತಲ್ಲಣಗೊಳಿಸಿತು.

ಕೆಲವೇ ಕ್ಷಣಗಳಲ್ಲಿ ಹೃದಯ ಕಂಗೊಳಿಸುವ ಆತಂಕ ಆವರಿಸಿದಾಗ, ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿಗಳಾದ ಅಖಿಲ. ಮುರುಗನ್. ಅಭಿಷೇಕ್ ವೇಗವಾಗಿ ಸ್ಥಳಕ್ಕೆ ಧಾವಿಸಿ ಸಾಹಸ ಮೆರೆದರು.

ಪಟಾಕಿ ಸಿಡಿಸಿ ಸಲಗವನ್ನು ಕಾಡಿನೊಳಗೆ ಓಡಿಸಿದ ಬಳಿಕ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಜನತೆಗೆ ನಿಟ್ಟುಸಿರು ಬಿಟ್ಟರು. ಈ ಊಹಾತೀತ ಸಾಹಸವನ್ನು ಕಂಡ ಸಾಕ್ಷಿಗಳು – “ಇವರು ಸಾಮಾನ್ಯರು ಅಲ್ಲ,

ಅರಣ್ಯ ರಕ್ಷಕರಾದ ನಿಜವಾದ ವೀರರು” ಎಂದು ಹೊಗಳಿದರು. ಜನರ ಜೀವ, ಆಸ್ತಿ ರಕ್ಷಿಸಲು ನಿರಂತರ ಹೋರಾಡುವ ಇವರಿಗೆ ಸರ್ಕಾರವು ಗೌರವ ನೀಡಬೇಕು ಎಂಬ ಜನಾಭಿಪ್ರಾಯ ಗಟ್ಟಿಯಾಗಿ ಕೇಳಿಬಂದಿದೆ.