ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ. ನಾವು ಇಡೀ ದೇಶ ಒಗ್ಗಟ್ಟಾಗಿರಬೇಕು. ನಮ್ಮ ದೇಶದ ಏಕತೆ, ಒಗ್ಗಟ್ಟನ್ನು ಮುರಿಬೇಕೆಂಬುದೇ ಈ ಸಂಚಿನ ಉದ್ದೇಶ ಎಂದರು.
ಅದಕ್ಕೆ ನಾವು ಯಾರು ಸಹ ಅವಕಾಶ ಮಾಡಿಕೊಡಬಾರದು. ದುರ್ಬಲಗೊಳಿಸಲು ನಾವು ಪ್ರಯತ್ನ ಪಟ್ಟರೆ ಸಂಚುಕೋರರಿಗೆ ಸಹಾಯ ಮಾಡಿದಾಗೆ ಆಗುತ್ತೆ, ದೇಶವನ್ನು ದುರ್ಬಲಗೊಳಿಸಲು ಈ ರೀತಿ ಮಾಡಲಾಗುತ್ತೆ. ಕೃತ್ಯ ಎಸಗಿದರನ್ನು,ಬೆಂಬಲ ನೀಡಿದವರನ್ನು ಮಟ್ಟ ಹಾಕಬೇಕು. ಯುದ್ದ ನಡೆಸುವ ಬಗ್ಗೆ ಸರ್ವಪಕ್ಷ ಸಭೆ, ಅಧಿಕಾರಿಗಳು, ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತೆ ಎಂದರು.

