ತಿ. ನರಸೀಪುರ: ತಲಕಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲಾಯಿತು. ತಲಕಾಡಿನ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರ ಸ್ಥಾನಕ್ಕೆ ಅಶೋಕ್ ಪಟೇಲ್ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ರಾಜಣ್ಣ ನಾಮಪತ್ರ ಸಲ್ಲಿಸಿದ್ದರು ಇವರ ವಿರುದ್ಧವಾಗಿ ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಅಧ್ಯಕ್ಷರಾಗಿ ಅಶೋಕ್ ಪಟೇಲ್ ಉಪಾಧ್ಯಕ್ಷರಾಗಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಅಶ್ವಿನ್ ಕುಮಾರ್ ಘೋಷಣೆ ಮಾಡಿದರು
ನಿರ್ದೇಶಕರುಗಳಾದ ಟಿ ಎಂ ದಿನೇಶ್, ರಂಗನಾಥ್, ನರೇಂದ್ರ, ಉಮಾಶಂಕರ್, ಉಮೇಶ್ ಟಿ ವಿ,ಇಂದ್ರಮ್ಮ ಭಾಗ್ಯಮ್ಮ, ಎನ್ ಚೆಲುವರಾಜು, ಯಶೋದಮ್ಮ ರವರುಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರು.

ನೂತನ ಅಧ್ಯಕ್ಷ ಅಶೋಕ್ ಪಟೇಲ್ ಮಾತನಾಡಿ ನಿರ್ದೇಶಕರ ವಿಶ್ವಾಸಕ್ಕೆ ದಕ್ಕೆ ಬರೆದಂತೆ ನಡೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಲು ಸಹಕರಿಸುವೆ ನಿರ್ದೇಶಕರಿಂದ ಬಂದಿರುವ ಅಹವಾಲಿನಂತೆ ಸಂಘಕ್ಕೆ ಕಚೇರಿ ಸಮಸ್ಯೆ ಇದ್ದು ನೂತನ ಕಚೇರಿಗೆ ಬೇಕಾದಂತಹ ವ್ಯವಸ್ಥೆಯನ್ನು ಸಚಿವ ಮಹದೇವಪ್ಪನವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರ ಅನುದಾನದಿಂದ ಅಭಿವೃದ್ಧಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿ ಆಯ್ಕೆಯಾದ ನಾವು ಒಟ್ಟಾಗಿ ಒಮ್ಮತದಿಂದ ರೈತರಿಗಾಗಿ ರೈತರ ಏಳಿಗೆಗಾಗಿ ಶ್ರಮಿಸೋಣ ಎಂದರು.
ಮುಂದುವರೆದು ಮಾತನಾಡಿ ನಿರ್ದೇಶಕರ ವಿಶ್ವಾಸಕ್ಕೆ ದಕ್ಕೆ ಬರೆದಂತೆ ನಡೆದುಕೊಂಡು ಸಂಘವನ್ನು ಅಭಿವೃದ್ಧಿಪಡಿಸಲು ಈಗಾಗಲೇ ನಿರ್ದೇಶಕರಿಂದ ಬಂದಿರುವ ಅಹವಾಲಿನಂತೆ ಕಚೇರಿಗೆ ಬೇಕಾದಂತಹ ವ್ಯವಸ್ಥೆಯನ್ನು ಸಚಿವ ಮಹದೇವಪ್ಪನವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರ ಅನುದಾನ ದಿಂದ ಅಭಿವೃದ್ಧಿಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಆಯ್ಕೆಯಾದ ನಾವು ಒಟ್ಟಾಗಿ ಒಮ್ಮತದಿಂದ ರೈತರಿಗಾಗಿ ರೈತರ ಏಳಿಗೆಗಾಗಿ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗರಾಜ್ ಮೂರ್ತಿ, ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಕುಮಾರ್ , ಒಡೆಯಂಡಹಳ್ಳಿ ಸುರೇಶ್, ಶ್ರೀನಿವಾಸ್ ಸಂಘದ ಕಾರ್ಯ ನಿರ್ವಹಣಾಧಿಕಾರಿ ಕುಮಾರ್ ಮುಂತಾದವರು ಹಾಜರಿದ್ದರು.

