ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. 8 ಮಂದಿ ಒಳಗೊಂಡಿದ್ದ ಫೈನಲ್ ಸುತ್ತಿನಲ್ಲಿ ಒಟ್ಟು 451.4 ಅಂಕಗಳನ್ನು ಕಲೆಹಾಕುವ ಮೂಲಕ ಭಾರತೀಯ ಶೂಟರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತಕ್ಕೆ ಮೂರನೇ ಕಂಚಿನ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾದ ಲಿಯು ಯುಕುನ್ 463.6 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದುಕೊಂಡರೆ, ಉಕ್ರೇನ್ ಸೆರ್ಹಿ ಕುಲಿಶ್ 461.3 ಪಾಯಿಂಟ್ಸ್​ನೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಸ್ವಪ್ನಿಲ್ ಕುಸಾಲೆ‌ ಸಾಧನೆ ನೋಡುವುದಾದರೇ, ವಿಶ್ವ ಚಾಂಪಿಯನ್‌ಶಿಪ್, ಕೈರೋ (2022) – 4ನೇ ಸ್ಥಾನ. ಏಷ್ಯನ್ ಗೇಮ್ಸ್ (2022) – ಚಿನ್ನ ಪದಕ., ವಿಶ್ವಕಪ್, ಬಾಕು (2023) – ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ., ವಿಶ್ವಕಪ್, ಬಾಕು (2023) ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಎರಡು ಬೆಳ್ಳಿ ಪದಕಗಳು., ವಿಶ್ವ ಚಾಂಪಿಯನ್‌ಶಿಪ್, ಕೈರೋ (2022) – ತಂಡದ ಸ್ಪರ್ಧೆಯಲ್ಲಿ ಕಂಚಿನ ಪದಕ. ಹಾಗೂ ವಿಶ್ವಕಪ್, ನವದೆಹಲಿ (2021) – ತಂಡದ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಿಕ್ಕಿದೆ.