ಕಾಸರಗೋಡು : ರೈಲಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮವ್ವಾರ್ n ಸುಂದರ (49) ಮತ್ತು ಮುರ್ಷಿ ದಾಬಾದ್ ನ ರೋಶನ್ ರಾಯ್ (19) ಬಂಧಿತ ಆರೋಪಿ.

ಇಬ್ಬರು ಬೇಕಲ ಬೀಚ್ ನ ಕಾರ್ಮಿಕ ರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 2.45 ರ ಸುಮಾರಿಗೆ ಮಂಗಳೂರು ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ ಬೇಕಲ ಸಮೀಪ ಕಲ್ಲೆಸೆದಿದ್ದು, ಪ್ರಯಾಣಿಕರು ಅಪಾಯ ಇಲ್ಲದೆ ಪಾರಾಗಿದ್ದರು. ಪೊಲೀಸರು ನಡೆಸಿದ ತನಿಖೆ ಯಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.