ಕಾಸರಗೋಡು: ರೈಲಿಗೆ ಕಲ್ಲೆಸೆದ ಆರೋಪಿಯನ್ನು ಗಂಟೆಗಳ ಅವಧಿಯಲ್ಲಿ ರೈಲ್ವೆ ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ತೆಕ್ಕಿಲ್ ಮೈಲಾಟಿ ಯ ಎಸ್ .ಅನಿಲ್ ಕುಮಾರ್ (41) ಬಂಧಿತ ಆರೋಪಿ. ಆದಿತ್ಯವಾರ ರಾತ್ರಿ ಬೇಕಲ ರೈಲ್ವೆ ನಿಲ್ದಾಣ ದ ಲ್ಲಿ ಘಟನೆ ನಡೆದಿದೆ. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿಗೆ ಈತ ಕಲ್ಲೆಸೆದಿದ್ದನು.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಇದೇ ರೈಲಿನಲ್ಲಿದ್ದ ಯುವತಿಗೆ ಕಿರುಕುಳ ನೀಡಲೆತ್ನಿಸಿದ್ದು, ಇದನ್ನು ಯುವತಿ ಜೊತೆ ಇದ್ದ ಯುವಕ ಪ್ರಶ್ನಿಸಿದ್ದಾನೆ.ಈ ಸಂದರ್ಭ ದಲ್ಲಿ ಈತ ಹಲ್ಲೆಗೆ ಮುಂದಾಗಿದ್ದಾನೆ.

ಈತ ಪಾನಮತ್ತನಾಗಿದ್ದನು ಎನ್ನಲಾಗಿದೆ. ಬೇಕಲ ರೈಲ್ವೆ ನಿಲ್ದಾಣದಲ್ಲಿ ಇಳಿದ ಈತ ಮತ್ತೆ ದಾಂಧಲೆ ಗೆ ಮುಂದಾಗಿದ್ದು, ರೈಲಿಗೆ ಕಲ್ಲೆಸೆ ದಿದ್ದನು. ಈ ಬಗ್ಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿದ ರೈಲ್ವೆ ಪೊಲೀಸರು ಸಿ ಸಿ ಟಿ ವಿ ದೃಶ್ಯ ಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಆರೋಪಿಯನ್ನು ಪೊಯಿನಾಚಿ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.