ಶಿವಮೊಗ್ಗ ಮೃಗಾಲಯದ ಹಿಪ್ಪೋ ಹಂಸಿನಿ ಮುಂಜಾನೆ ಆವರಣದಲ್ಲಿ ಕಾಣಿಸಿಕೊಂಡು ಮಧ್ಯಾಹ್ನ ನಿಶ್ಯಬ್ದವಾಗಿ ಕೊಳದ ನೀರಲ್ಲಿ ಕಳೆದು, ಮೂರು ಗಂಟೆ ಸುಮಾರಿಗೆ ಸಾವನ್ನಪ್ಪಿತು.

ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಡಾ ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ನೀರಾನೆ ಹಂಸಿಣಿ ಸಾವನ್ನಪ್ಪಿದೆ. 12 ವರ್ಷದ ನೀರಾನೆ ಹಂಸಿಣಿ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಸುದ್ದಿಯಾಗಿತ್ತು.

ಮಾರ್ಚ್ 20 ನಡೆದಿದ್ದ ದುರಂತದಲ್ಲಿ ಡಾ ಸಮಿಕ್ಷಾ ರೆಡ್ಡಿ ಅವರು ಸಾವನ್ನಪ್ಪಿದ್ದರು. ಆ ಬಳಿಕ ಹಿಪ್ಪೋ ಗರ್ಭಪಾತ ಹಾಗೂ ತೀವ್ರ ಸೋಂಕಿನಿಂದ ಬಳಲುತ್ತಿದ್ದ ಹಂಸಿಣಿ ಉಳಿಸಿಕೊಳ್ಳಲು ವೈದ್ಯರು ನಿರಂತರವಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀರಾನೆ ಕೊನೆಯುಸಿರೆಳೆದಿದೆ.

View this post on Instagram

A post shared by News Karnataka (@newskarnataka)