ಕಾರವಾರ: ನೇತ್ರಾಣಿ ದ್ವೀಪದಲ್ಲಿ ಮೀನುಗಾರರಿಗೆ ಹಾಗೂ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ದ್ವೀಪದಲ್ಲಿ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಮೂರು ದಿನಗಳ ಕಾಲ ಮೀನುಗಾರರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಅ.14ರಿಂದ 16ರವರೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನೇತ್ರಾಣಿ ದ್ವೀಪದಿಂದ 10 ನಾಟಿಕಲ್ ಮೈಲು ದೂರದವರೆಗೆ ನಿಷೇಧ ಹೇರಲಾಗಿದೆ. ಆಗಸದಿಂದ ಯುದ್ಧ ಫೈಟರ್ ಮೂಲಕ ನೌಕಾದಳದಿಂದ ಸಮರಾಭ್ಯಾಸ ನಡೆಯಲಿದೆ. ಆಗಸದಿಂದ ನೇತ್ರಾಣಿ ದ್ವೀಪದಲ್ಲಿ ಫೈರಿಂಗ್ ನಡೆಯುವುದರಿಂದ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ 3 ದಿನ ನಿರ್ಬಂಧ ಹೇರಲಾಗಿದೆ.
ಮುರುಡೇಶ್ವರ ಕರ್ನಾಟಕದ ಪ್ರಸಿದ್ಧ ಸ್ಥಳ. ಇಲ್ಲಿಗೆ ಪ್ರತಿದಿನ ನೂರಾರ ಮಂದಿ ಭೇಟಿ ನೀಡುತ್ತಾರೆ. ಮುರುಡೇಶ್ವರ ದೇವಸ್ಥಾನ ನೋಡಲು, ಬೀಚ್ನಲ್ಲಿ ಎಂಜಾಯ್ ಮಾಡಲು ಹಾಗೂ ನೇತ್ರಾಣಿ ದ್ವೀಪಕ್ಕೆ ಹೋಗಲು ಜನ ಸಾಗರವೇ ಹರಿದುಬರುತ್ತೆ. ಸದ್ಯ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ಇಲ್ಲಿ ಪ್ರವಾಸಿಗರು, ಮೀನುಗಾರರಿಗೆ ಪ್ರವೇಶವಿಲ್ಲ.

