ರಾಮನಗರ : ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ 6 ಜನರ ವಿರುದ್ಧ FIR ದಾಖಲಿಸಿದ್ದಾರೆ.
ರಾಮನಗರ ಜಿಲ್ಲೆಯ ಯಾರಬ್ ನಗರದಲ್ಲಿ ರಾತ್ರಿಯ ವೇಳೆ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದು, ಈ ವೇಳೆ ವೀಲಿಂಗ್ ಮಾಡುತ್ತಿದ್ದವರನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಬೈಕ್ ಕಿತ್ತುಕೊಂಡು ಹೋಗಿದ್ದಾರೆ.
ರಾಮನಗರದ ಬೀಡಿ ಕಾಲೋನಿ ನಿವಾಸಿಯಾಗಿರುವ ಸೈಫ್ ಖಾನ್ ಚನ್ನಪಟ್ಟಣ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೈಫ್ ಖಾನ್ ನನ್ನು ಬಂಧಿಸಿ ಬೈಕ್ ಜಪ್ತಿಗೆ ಪೊಲೀಸರು ತೆರಳಿದ್ದಾರೆ.
ಈ ವೇಳೆ ಪೊಲೀಸ್ ಅಧಿಕಾರಿಗಳಾದ ಜಯಕುಮಾರ್ ಹಾಗೂ ಬಸವರಾಜ್ ಮೇಲೆ ಪುಂಡರಾದ ಸೈಫ್ ಖಾನ್ ಮತ್ತು ಆತನ ಪುಡಿ ಗ್ಯಾಂಗ್ ಹಲ್ಲೆ ನಡೆಸಿ ಬೈಕ್ ಕಿತ್ತುಕೊಂಡು ಹೋಗಿದ್ದಾರೆ. ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆ ಅಡಿ 132 352 310ರಡಿ ಪ್ರಕರಣ ದಾಖಲಾಗಿದೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸೈಫ್ ಖಾನ್ ಮತ್ತು ಆತನ ತಂದೆ ಯೂಸುಫ್ ಖಾನ್ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಸೈಫ್ ಖಾನ್ ತಂದೆ ಯೂಸುಫ್ ಖಾನ್ ನನ್ನು ಅರೆಸ್ಟ್ ಮಾಡಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

