ರಾಮನಗರ: ಗೀಸರ್ ಬಳಸುವಾಗ ಎಚ್ಚರವಹಿಸುವುದು ಅಗತ್ಯ. ಗೀಸರ್ ಗ್ಯಾಸ್ ಅನಿಲ ಬಹಳ ವಿಷಕಾರಿಯಾಗಿದ್ದು ಕ್ಷಣಾರ್ಧಾದಲ್ಲೇ ಜೀವ ತೆಗೆಯುತ್ತದೆ. ಇದೀಗ ಗೀಸರ್ ಗ್ಯಾಸ್ ಸೋರಿಕೆ ಯಿಂದಾಗಿ ಉಸಿರುಗಟ್ಟಿ ತಾಯಿ-ಮಗ ಇಬ್ಬರು ಮೃತಪಟ್ಟಿದ್ದಾರೆ. ರಾಮನಗರದ ಮಾಗಡಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ. ಶೋಭಾ (40), ದಿಲೀಪ್ (17) ಮೃತ ದುರ್ದೈವಿಗಳು.
ದಿಲೀಪ್ ಬಿಸಿ ನೀರು ಕಾಯಿಸಲು ಗ್ಯಾಸ್ ಗೀಜರ್ ಆನ್ ಮಾಡಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಆತ ಉಸಿರುಗಟ್ಟಿ ಮೃತಪಟ್ಟಿದ್ದ. ಸುಮಾರು ಸಮಯದವರೆಗೂ ಮಗ ಬಾರದೇ ಇದ್ದಾಗ, ಆತನನ್ನು ನೋಡಲು ಬಾತ್‌ರೂಮ್‌ಗೆ ಬಂದ ಶೋಭಾ, ವಿಷ ಅನಿಲ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಇತ್ತ ಅವರಿಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ ಅವರಿಬ್ಬರು ಮೃತಪಟ್ಟಿದ್ದರು. ನಿನ್ನೆ ಭಾನುವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

