ರಾಯಚೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​​ನನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ನಿನ್ನೆ ಬಳ್ಳಾರಿಗೆ ಬಂದಿದ್ದರು. ಇದಕ್ಕೂ ಮುನ್ನ ನಟ ದರ್ಶನ್‌ಗಾಗಿ ಪತ್ನಿ ವಿಜಯಲಕ್ಷ್ಮಿ, ದೇವರ ಮೊರೆ ಹೋಗಿದ್ದಾರೆ.

ಮಂತ್ರಾಲಯ ಗುರುರಾಯರ ದರ್ಶನ ಪಡೆದಿದ್ದಾರೆ. ಗುರುವಾರ ಬೆಳಗ್ಗೆ ಸಾಮಾನ್ಯ ಭಕ್ತರಂತೆ ವಿಜಯಲಕ್ಷ್ಮಿ ಅವರು, ರಾಯರ ದರ್ಶನ ಪಡೆದಿರುವ ವೀಡಿಯೋ ವೈರಲ್ ಆಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್‌ ಮಂತ್ರಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಪತಿ ದರ್ಶನ್‌ಗೆ ಬಂದೊದಗಿರುವ ಕಷ್ಟಗಳು ದೂರಾಗಲಿ ಎಂದು ರಾಯರಲ್ಲಿ ವಿಜಯಲಕ್ಷ್ಮಿ ಪ್ರಾರ್ಥಿಸಿದ್ದಾರೆ. ಸಾಮಾನ್ಯ ಭಕ್ತರಂತೆ ಸೇವಾ ಟಿಕೆಟ್ ಪಡೆದು ದರ್ಶನ ಪಡೆದಿದ್ದಾರೆ. ಮಠದವರಿಗೂ ಮಾಹಿತಿ ನೀಡದೆ ನಟನ ಪತ್ನಿ ಬಂದು ಹೋಗಿದ್ದಾರೆ. ರಾಯರ ದರ್ಶನ ಪಡೆದು ನಿನ್ನೆ ಬಳ್ಳಾರಿಗೆ ಪ್ರಯಾಣ ಬೆಳೆಸಿದ್ದರು.

— 𝐌𝐚𝐝𝐡𝐮 𝐕 𝐂𝐡𝐚𝐤𝐫𝐚𝐯𝐚𝐫𝐭𝐡𝐲 (@dasa7999_v) September 5, 2024