ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಸಾರಿಗೆ ಬಸ್ ವೊಂದು ಪಲ್ಟಿಯಾಗಿದ್ದು, ಪರಿಣಾಮ ಓರ್ವ ಪ್ರಯಾಣಿಕನ ಕಾಲು ಮುರಿದಿದ್ದರೆ, 14 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಘಟನೆ ರಾಯಚೂರು ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.

ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ವೇಳೆ ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ನಿದ್ದೆ ಮಂಪರಿನಿಂದ ನಿಯಂತ್ರಣ ಕಳೆದುಕೊಂಡ ಚಾಲಕನ ಬಸ್ ರಸ್ತೆ ಬಿಟ್ಟು ಜಮೀನಿಗೆ ಉರುಳಿದೆ ಎನ್ನಲಾಗಿದೆ.

ಬಸ್ ಪಲ್ಟಿಯಾದ ಪರಿಣಾಮ ಅಪಘಾತದಲ್ಲಿ ವಿಶ್ವನಾಥ್ ಎಂಬುವವರ ಕಾಲಿನ ಮೂಳೆ ಮುರಿದಿದೆ. ಸದ್ಯ ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಕ್ರೇನ್ ಮೂಲಕ ಬಸ್ ಅನ್ನು ಮೇಲಕ್ಕೆ ಎತ್ತಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ  ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.