ಕಾಸರಗೋಡು : ಯುಎಪಿಎ ಪ್ರಕರಣ ದಾಖಲಾಗಿ ತಲೆ ಮರೆಸಿಕೊಂಡಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಅಸ್ಸಾಮ್ ನ ತನಿಖಾ ತಂಡ ಕಾಸರಗೋಡಿನಿಂದ ಬಂಧಿಸಿದೆ.
ಎಂ . ಬಿ ಶಾಬ್ ಶೇಖ್ ( ೩೧) ಬಂಧಿತ ಆರೋಪಿ . ಬುಧವಾರ ಮುಂಜಾನೆ ಪಡನ್ನ ಕ್ಕಾಡ್ ನಿಂದ ಈತನನ್ನು ಬಂಧಿಸಿದೆ. ಖಚಿತ ಮಾಹಿತಿಯಂತೆ ಮುಂಜಾನೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ. ಈತ ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳಿ ಅಸ್ಸಾಂ ನಲ್ಲಿ ತಂಗಿದ್ದನು.
ಬಳಿಕ ಭಾರತೀಯ ಪೌರತ್ವ ತೋರಿಸಿ ಈತ ನಕಲಿ ಪಾಸ್ ಪೋರ್ಟ್ ನ್ನು ಪಡೆದ್ದಿದ್ದನು ಎನ್ನಲಾಗಿದೆ . ಇದರಿಂದ ಈತನ ವಿರುದ್ದ ಯು ಎ ಪಿ ಎ ದಾಖಲಿಸಲಾಗಿತ್ತು. ಪಡನ್ನಕ್ಕಾಡ್ ನ ಕ್ವಾಟರ್ಸ್ ವೊಂದರಲ್ಲಿ ಈತ ತಲೆಮರೆಸಿಕೊಂಡಿದ್ದು , ಹೊಸದುರ್ಗ ಪೋಲೀಸರ ಸಹಾಯದಿಂದ ಈತನನ್ನು ಬಂಧಿಸಲಾಗಿದೆ.
ಒಂದು ತಿಂಗಳ ಹಿಂದೆಯಷ್ಟೇ ಈತ ಪಡನ್ನಕಾಡಿಗೆ ತಲಪಿದ್ದನು. ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದನು. ಈತನಿಗಾಗಿ ಅಸ್ಸಾಮ್ ಪೊಲೀಸರು ಲುಕ್ ಔಟ್ ನೋಟೀಸ್ ಕಳುಹಿಸಿದ್ದರು. ಹೊಸದುರ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಅಸ್ಸಾಂ ಗೆ ಕೊಂಡೊಯ್ಯಲಾಗಿದೆ.

