ಮಂಜೇಶ್ವರ: ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ಹೊಸಂಗಡಿಯಲ್ಲಿ ನಡೆದಿದೆ ಮೀಯಪದವು ನಿವಾಸಿ ಹಾಗೂ ಮಂಜೇಶ್ವರ ಕೆದುಂಬಾಡಿಯಲ್ಲಿ ವಾಸಿಸುವ ಜಯಾನಂದ (48) ಮೃತಪಟ್ಟವರು.

ಗುರುವಾರ ಸಂಜೆ 4 ಗಂಟೆಯ ವೇಳೆ ಅಫಘಾತ ಉಂಟಾಗಿದೆ. ಹೊಸಂಗಡಿಯಲ್ಲಿ ಬಸ್ಸಿಳಿದು ರಸ್ತೆ ದಾಟುತ್ತಿದ್ದಾಗ ಕಾಸರಗೋಡು ಕಡೆಯಿಂದಅತೀ ವೇಗದಲ್ಲಿ ಬಂದ ಇನ್ನೋವ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡ ಜಯಾನಂದರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.