Categories: ಕರ್ನಾಟಕ

ನಿಮ್ಮ ನ್ಯೂಸ್‌ ಕರ್ನಾಟಕ ಸುದ್ದಿ ವಾಹಿನಿ ಕೇಬಲ್‌ ನಲ್ಲಿ “NKTV” ಆಗಿ ಲೋಕಾರ್ಪಣೆ

ನ್ಯೂಸ್‌ ಕರ್ನಾಟಕ ಸುದ್ದಿ ವಾಹಿನಿ ನಿಮ್ಮ ಮುಂದೆ ಹೊಸ ಹೆಜ್ಜೆಯನ್ನಿಡುತ್ತಿದೆ. ಇದರಲ್ಲಿ ರಾಜ್ಯ, ದೇಶ ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ, ಟೆಕ್, ಆಟೋ, ಟ್ರೆಂಡ್ಸ್ ಸೇರಿ ನೂರಾರು ತರಹೇವಾರಿ ಸುದ್ದಿ ಗಳ ಬರಪೂರವೇ ಇದೆ. ಕರ್ನಾಟಕದಲ್ಲಿ ವಿಶ್ವಾಸಾರ್ಹ ಸುದ್ದಿ ವಾಹಿನಿಯ ಎಲ್ಲಾ ಸುದ್ದಿಗಳು, ವಿಡಿಯೋಗಳು, ಉತ್ತಮ ಗುಣಮಟ್ಟದ ಪೋಟೋಗಳು ಇಲ್ಲಿ ಸಿಗುತ್ತವೆ. ಜನರಿಗೆ ಅವರದೇ ಭಾ‍ಷೆಗಳಾದ ಕನ್ನಡ, ಇಂಗ್ಲಿಷ್‌ ಹಾಗೂ ತುಳು ಭಾಷೆಗಳಲ್ಲಿ ಸುದ್ದಿಗಳನ್ನು ಕೊಡಬೇಕೆನ್ನುವುದು “ನ್ಯೂಸ್‌ ಕರ್ನಾಟಕ”ದ ಉದ್ದೇಶ.

ನಮ್ಮ ಸಂಸ್ಥೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ನಿಮಿಷ ಮಾತ್ರದಲ್ಲಿ ನಿಮ್ಮ ಮುಂದಿಡುತ್ತದೆ. ಓದುಗರು ಮತ್ತು ವೀಕ್ಷಕರ ನಡುವೆ ಸದಾ ಮುಖಾಮುಖಿ ನಡೆಸಬೇಕೆನ್ನುವುದು ನಮ್ಮ ಆಶಯ. ನಿಮ್ಮ ದೂರು, ದುಮ್ಮಾನಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. “ಸತ್ಯ ನಿಷ್ಪಕ್ಷಪಾತ” ಎಂಬ ತನ್ನ ಧ್ಯೇಯ ವಾಕ್ಯದಂತೆ ನ್ಯೂಸ್‌ ಕರ್ನಾಟಕ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಓಡುತ್ತಿರುವ ಪ್ರಪಂಚದಲ್ಲಿ, ಪೈಪೋಟಿಯ ಭರದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದ್ದಿಯನ್ನು ನಿಷ್ಪಕ್ಷಪಾತ ವಾಗಿ ಜನರಿಗೆ ಮುಟ್ಟಿಸುತ್ತವೆ.

2012 ರ ಮೇ ತಿಂಗಳಿನಲ್ಲಿ ಕನ್ನಡದಲ್ಲಿ ಮೊದಲ ಹೆಜ್ಜೆಯನಿಟ್ಟ ನ್ಯೂಸ್‌ ಕರ್ನಾಟಕ ಸುದ್ದಿಜಾಲತಾಣ, ೧೭ ಮಾರ್ಚ್‌ 2013ರಲ್ಲಿ ಕನ್ನಡ ಜೊತೆಗೆ ಇಂಗ್ಲಿಷ್‌ ಸುದ್ದಿ ಪೋರ್ಟಲ್‌ ಅನ್ನು ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಓದುಗರ ಬೆಂಬಲದಿಂದ ನಮ್ಮ ಸಂಸ್ಥೆ ಮತ್ತೊಂದು ಹೆಜ್ಜೆಯೆಂಬಂತೆ 2023 ರಲ್ಲಿ ತುಳು ಸುದ್ದಿ ಪೋರ್ಟಲ್‌ ಅನ್ನು ಪ್ರಾರಂಭಿಸುವ ಮೂಲಕ ಕರಾವಳಿಗರಿಗೆ, ಓದುಗರಿಗೆ ಮತ್ತಷ್ಟು ಹತ್ತಿರವಾಯಿತು. ಜಾಲತಾಣಗಳೊಟ್ಟಿಗೆ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್ ಹಾಗೂ ಫೇಸ್ ಬುಕ್ ಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತ್ತು. ಇನ್ನು ಸದಾ ನಿಮ್ಮೊಂದಿಗಿರಲು ನ್ಯೂಸ್‌ ಕರ್ನಾಟಕ NKTV ಆಗಿ ನಿಮ್ಮ ಮನೆಯ ಕೇಬಲ್‌ ನಲ್ಲಿ ಸಿಗಲಿದೆ. NKTV ಯು DEN ನೆಟ್ ವರ್ಕ್ ನಲ್ಲಿ ಚಾನೆಲ್‌ ನಂಬರ್‌ 70ರಲ್ಲಿ ಪ್ರಸಾರಗೊಳ್ಳುತ್ತದೆ. ಈ ಮೂಲಕ ನಿಮ್ಮ ಮನೆಯ ಕೇಬಲ್‌ ನಲ್ಲಿ ಸದಾ ನಿಖರ ಸುದ್ದಿ, ಮನರಂಜನೆ, ನೇರಪ್ರಸಾರ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು. ಹಾಗೆಯೇ ನೇರವಾಗಿ tv.newskarnataka.com ವೆಬೆಸೈಟ್‌ ನ ಮೂಲಕ ನೀವು ಲೈವ್ ಆಪ್‌ಡೇಟ್‌ ಪಡೆಯಬಹುದು.

ಇದರಿಂದ ನ್ಯೂಸ್‌ ಕರ್ನಾಟಕ ಕೇಬಲ್‌ ಚಾನೆಲ್‌ ನಿಮಗೆ ಮತ್ತಷ್ಟು ಹತ್ತಿರವಾಗುತ್ತದೆ. ಮುಖ್ಯವಾಗಿ ನಾವು ಉಡುಪಿ. ದಕ್ಷಿಣ ಕನ್ನಡ ಅಥವಾ ಯಾವುದೇ ನಿಮ್ಮ ಊರಿನಲ್ಲಿ ನಡೆಯುವ ಸಭೆ ಸಮಾರಂಭ ಹಾಗು ಇನ್ನಿತರ ಕಾರ್ಯಕ್ರಮಗಳಿಗೆ ಕೈಗೆಟಕುವ ಬೆಲೆಯಲ್ಲಿ ನೇರಪ್ರಸಾರವನ್ನು ನ್ಯೂಸ್‌ ಕರ್ನಾಟಕ ಮಾಡಿಕೊಡಲಿದೆ. ಇದಕ್ಕಾಗಿ ನೀವು +91 96096 03990 ಸಂಪರ್ಕಿಸಬಹುದು. ಇನ್ನು ನ್ಯೂಸ್‌ಕರ್ನಾಟಕ ಆ್ಯಪ್‌ ಮೂಲಕ ಪ್ರಪಂಚವನ್ನೇ ನಿಮ್ಮ ಅಂಗೈಲಿ ಹಿಡಿಯಿರಿ. ಈಗಲೇ ಪ್ಲೇ ಸ್ಟೋರ್‌ ಗೆ ಹೋಗಿ ನ್ಯೂಸ್‌ಕರ್ನಾಟಕ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಿ.

ದೇಶದ ಮಟ್ಟಿಗೆ “ನ್ಯೂಸ್‌ ಕರ್ನಾಟಕ” ಒಂದು ಸತ್ಯ, ನಿಷ್ಪಕ್ಷಪಾತ, ಒಂದು ವಿಶ್ವಾಸ. ಇಂಗ್ಲಿಷ್‌, ಕನ್ನಡ ಹಾಗು ತುಳು ಈ ಮೂರು ಭಾಷೆಗಳಲ್ಲಿ ಮಸ್ತ್‌ ಮಸ್ತ್‌ ಸುದ್ದಿಗಳಿಗಾಗಿ ನೋಡ್ತಾ ಇರಿ ನ್ಯೂಸ್‌ ಕರ್ನಾಟಕ. . . .

Ashitha S

Recent Posts

ʼನಾನು ನೋಡೋಕೆ ಅಷ್ಟೇನೂ ಚೆನ್ನಾಗಿಲ್ಲ ಅಂತ ಒಳ್ಳೆಯ ಸಿನಿಮಾ ಅವಕಾಶಗಳು ಬರಲಿಲ್ಲʼ

ಟಾಲಿವುಡ್​ ನಟ ಅಲ್ಲು ಅರ್ಜುನ್​ ನಟಿಸಿದ ‘ಆರ್ಯ’ ಸಿನಿಮಾ ತೆರೆಕಂಡು 20 ವರ್ಷ ಕಳೆದಿದೆ. ಆ ದಿನಗಳು ಹೇಗಿದ್ದವು ಎಂಬುದನ್ನು…

10 mins ago

ಮಳೆ ಸುರಿದ ಖುಷಿಗೆ ಕಾಡು ಬಸವೇಶ್ವರನಿಗೆ ವಿಶೇಷ ಪೂಜೆ

ನಂಜನಗೂಡು ತಾಲೂಕಿನ  ಈಶ್ವರಗೌಡನ ಹಳ್ಳಿ ಗ್ರಾಮದಲ್ಲಿ  ವರ್ಷದ ಮೊದಲ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದ ಜನತೆಗೆ ಹಾಗೂ ರೈತರಿಗೆ…

18 mins ago

ಮತದಾನದ ಮರುದಿನ ಆಲಗೂರ್ ನಿರಾಳ: ಸಚಿವ ಪಾಟೀಲರ ಜೊತೆ ಊಟ, ಮನೆಯವರ ಜೊತೆ ಮಾತು

ಲೋಕಸಭೆ ಚುನಾವಣೆ ಮಂಗಳವಾರ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು…

35 mins ago

ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ: ಅಪ್ರಾಪ್ತನ ಬಂಧನ

ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಸಿದ ಘಟನೆ ಮೇ 6ರಂದು ನಡೆದಿದ್ದು,…

41 mins ago

ಸುಡು ಬಿಸಿಲು: ದಾಹ ನೀಗಿಸಲು ಕಾಡಿನಿಂದ ನಾಡಿಗೆ ಬಂದ ಆನೆಗಳ ಹಿಂಡು

ಜಿಲ್ಲೆಯ ಮಲೇ ಮಹದೇಶ್ವರ ಬೆಟ್ಟದ ಹಾಡಿಯೊಂದರ ಸಮೀಪ ಆನೆಗಳ ಹಿಂಡೊಂದು ಜಾನುವಾರುಗಳಿಗೆ ಕಟ್ಟಿಸಿರುವ ನೀರಿನ ತೊಟ್ಟಿಯಲ್ಲಿ ದಾಹ ತೀರಿಸಿಕೊಂಡು ಕಾಡಿಗೆ…

1 hour ago

ರೈಲು ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ರೈಲ್ವೆ ಇಲಾಖೆ ನಿರ್ಧಾರ

ರೈಲ್ವೆ ನಿಲ್ದಾಣಗಳಿಗೆ ಭೇಟಿ ನೀಡುವ ಪ್ರಯಾಣಿಕರ ಯೋಗಕ್ಷೇಮವನ್ನು ಹೆಚ್ಚಿಸುವ ಅನ್ವೇಷಣೆಯಲ್ಲಿ, ಭಾರತೀಯ ರೈಲ್ವೆ ಇಲಾಖೆ 2023ರ ಆಗಸ್ಟ್ ತಿಂಗಳಲ್ಲಿ ಪ್ರಧಾನ…

1 hour ago