ಹುಬ್ಬಳ್ಳಿ: ನವಜಾತ ಶಿಶುವೊಂದನ್ನು ರಸ್ತೆ ಪಕ್ಕದ ಚರಂಡಿವೊಂದರಲ್ಲಿ ಎಸೆದು ಹೋಗಿರುವ ಘಟನೆ ಹುಬ್ಬಳ್ಳಿಯ ಗಾಮನಗಟ್ಟಿ ಗ್ರಾಮದ ತಾರಿಹಾಳ ಬಳಿ ನಡೆದಿದೆ.
ಶವವಾಗಿ ನವಜಾತು ಶಿಶು ಚರಂಡಿಯಲ್ಲಿ ಪತ್ತೆಯಾಗಿದ್ದು, ಯಾರದೆಂಬುದು ತಿಳಿದು ಬಂದಿಲ್ಲ. ಆದ್ರೆ ನವಜಾತ ಶಿಶುವನ್ನು ಚರಂಡಿಯಲ್ಲಿ ಎಸೆದು ಹೋದ ಹಿನ್ನಲೆ ಸಾರ್ವಜನಿಕರು ನವಜಾತು ಶಿಶುವನ್ನು ನೋಡಿ, ಎಪಿಎಂಸಿ ನವನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ನವಜಾತ ಶಿಶುವನ್ನು ಚರಂಡಿಯಿಂದ ತೆಗೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

