ಪರ್ಕಳ: ಇಲ್ಲಿನ ನೇತಾಜಿ ಸ್ಪೋರ್ಟ್ಸ್ ಕ್ಲಬ್ 50 ವರುಷಗಳನ್ನು ಪೂರೈಸಿದ್ದು, ತನ್ನ ಸುವರ್ಣ ಮಹೋತ್ಸವದ ನಿಮಿತ್ತ ವರುಷವಿಡೀ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅದರಂತೆ ನವಂಬರ್ ತಿಂಗಳ ದಿನಾಂಕ 16ರಂದು ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಚಿಣ್ಣರ ಚಿತ್ರ ರಚನಾ ಸ್ಪರ್ಧೆಯು ಜರಗಲಿದೆ. ಎಲ್. ಕೆ.ಜಿ.ಯಿಂದ ಹತ್ತನೆ ತರಗತಿಯವರೆಗಿನ ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ಜರಗಲಿದ್ದು ವಿಜೇತರಿಗೆ ಆಕರ್ಷಕ ಬಹುಮಾನಗಳಿದ್ದು ಭಾಗವಹಿಸಿದ ಎಲ್ಲಾ ಸ್ಫರ್ಧಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.
ಸ್ಪರ್ಧಿಗಳು ಕ್ಯು.ಆರ್. ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಮುಂಚಿತವಾಗಿ ನೋಂದಾವಣಿ ಮಾಡಿಕೊಳ್ಳಬಹುದಾಗಿದ್ದು ಸ್ಥಳದಲ್ಲಿಯೂ ನೋಂದಣಿಗೆ ಅವಕಾಶವಿರುತ್ತದೆ. ನೋಂದಣಿ ಉಚಿತವಾಗಿರುತ್ತದೆ.
ಸ್ಪರ್ಧಿಗಳು ಚಿತ್ರಬಿಡಿಸಲು ಬೇಕಾಗುವ ಪರಿಕರಗಳೊಂದಿಗೆ ಸ್ಪರ್ಧೆಯ ಸ್ಥಳದಲ್ಲಿ ಬೆಳಿಗ್ಗೆ 9.30 ಗಂಟೆಯ ಒಳಗಾಗಿ ಹಾಜರಾಗಿ ಸಂಯೋಜಕರು ನೀಡುವ ಹಾಳೆಯಲ್ಲಿ ತಮ್ಮಿಚ್ಛೆಯ ಚಿತ್ರಗಳನ್ನು ಬಿಡಿಸಬಹುದಾಗಿದೆ. ಚಿತ್ರಕಲಾವಿದ ಸತೀಶ್ಚಂದ್ರರವರು ಜಲವರ್ಣ ಚಿತ್ರ ರಚನಾ ಪ್ರಾತ್ಯಕ್ಷಿಕೆಯನ್ನು ನೀಡಲಿರುವರು. ಆರ್ಟಿಸ್ಟ್ಸ್ ಫೋರಂ ಉಡುಪಿ ಇವರು ಸ್ಪರ್ಧೆಯ ತೀರ್ಪು ನೀಡಲಿರುವರು ಎಂದು ಕ್ಲಬ್ಬಿನ ಪ್ರಕಟಣೆ ತಿಳಿಸಿದೆ.

