ಮೈಸೂರು: ದಸರಾ ಗಜಪಡೆ ಬಿಡಾರಕ್ಕೆ ಯುವರಾಣಿ ತ್ರಿಷಿಕಾ ಕುಮಾರಿ ಭೇಟಿ ನೀಡಿದರು. ಪುತ್ರ ಆದ್ಯಾವೀರ್ ಜೊತೆ ದಸರಾ ಗಜಪಡೆ ವೀಕ್ಷಣೆ ಮಾಡಿದರು. ಗಜಪಡೆಗೆ ಕಬ್ಬು, ಬಾಳೆಹಣ್ಣು ತಿನ್ನಿಸಿ ರಾಜವಂಶಸ್ಥರು ಸಂಭ್ರಮಿಸಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಅರಮನೆ ಆವರಣದಲ್ಲಿ ಗಜಪಡೆ ಬೀಡುಬಿಟ್ಟಿದ್ದರು. ಪುತ್ರ ಆಧಯವೀರ್ ಸೇರಿ ಸಂಬಂಧಿಕರ ಜೊತೆ ದಸರಾ ಗಜಪಡೆಯನ್ನು ತ್ರಿಷಿಕಾ ಕುಮಾರಿ ವೀಕ್ಷಿಸಿದರು.
ಆನೆಗಳ ತಾಲೀಮು, ಆರೋಗ್ಯ, ಯೋಗಕ್ಷೇಮದ ಬಗ್ಗೆ ಮಾಹಿತಿಯನ್ನು ರಾಜವಂಶಸ್ಥರು ಪಡೆದರು. ಆನೆಗಳ ಆಹಾರ ಪದ್ಧತಿ ಹಾಗೂ ಆರೈಕೆಯನ್ನು ತ್ರಿಷಿಕಾ ಕುಮಾರಿ ವಿಚಾರಿಸಿದರು. ದಸರಾ ಗಜಪಡೆ ಸೇರಿದಂತೆ ಅರಮನೆ ಆನೆಗಳಿಗೆ ಕಬ್ಬು, ಬಾಳೆಹಣ್ಣನ್ನು ತ್ರಿಷಿಕಾ ಕುಮಾರಿ ತಿನ್ನಿಸಿದರು. ಆನೆಗಳಿಗೆ ಕಬ್ಬು, ಬಾಳೆಹಣ್ಣು ನೀಡಿ ಆದ್ಯಾವೀರ್ ಸಂಭ್ರಮಿಸಿದರು.

