ಮೈಸೂರು : ದಸರಾ ಆನೆ ಭೀಮಾ ನೆ ಜೊತೆ ಯುವತಿ ಚೆಲ್ಲಾಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಭೀಮಾ, ಅಭಿಮನ್ಯು, ಸೇರಿದಂತೆ ದಸರಾ ಆನೆಗಳ ಜೊತೆ ಚೆಲ್ಲಾಟವಾಡಿದ್ದಾಳೆ. ಮೈಸೂರಿನ ಯುವತಿ ಕೃತಿ ಎಂಬಾಕೆಯಿಂದ ದಸರಾ ಆನೆಗಳ ಜೊತೆ ರೀಲ್ಸ್ ಮಾಡಲಾಯಿತು.
ಯುವತಿಗೆ ಆನೆಗಳ ಬಳಿ ತೆರಳಲು ಅನುಮತಿ ನೀಡಿದ್ದು ಯಾರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ತಡರಾತ್ರಿ ಆನೆಗಳ ಜೊತೆ ರೀಲ್ಸ್ ಮಾಡಿ ಯುವತಿ ತುಂಟಾಟ ನಡೆಸಿದ್ದಾಳೆ. ತೀವ್ರ ವಿವಾದಕ್ಕೆ ಯುವತಿ ರೀಲ್ಸ್ ವಿಡಿಯೋ ಕಾರಣವಾಗಿದೆ.

