ಮೈಸೂರು: ಪೆಟ್ರೋಲ್ ಸುರಿದುಕೊಂಡು ಯುವ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಜು.19 ರಂದು ಘಟನೆ ನಡೆದಿದ್ದು, ಬಾಟಲ್ನ್ ನಲ್ಲಿ ಪೆಟ್ರೋಲ್ ತಂದು ಸುರಿದುಕೊಂಡು ರೈತ ಬೆಂಕಿ ಹಚ್ಚಿಕೊಂಡಿದ್ದಾರೆ. ಶಿವಕುಮಾರ್( 35) ಆತ್ಮಹತ್ಯೆಗೆ ಶರಣಾದ ರೈತ. ಬೋಗಾದಿ ಎರಡನೇ ಹಂತದಲ್ಲಿ ಘಟನೆ ನಡೆದಿದೆ.

ಹೆಚ್‌ ‌ಡಿ ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದ ಯುವ ರೈತನಾಗಿದ್ದು, ಕೃಷಿಗಾಗಿ ಕೈ ಸಾಲ ಮಾಡಿಕೊಂಡಿದ್ದನು. ಬೆಳೆ ಕೈ ಕೊಟ್ಟ ಹಿನ್ನಲೆ ಸಾಲಭಾದೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಸ್ವತಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.