ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2026 ದಸರಾದಲ್ಲಿ ವೈಭವ ಕಂಬಳ ಉತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ.

ಅಕ್ಟೋಬರ್ 18 ಮತ್ತು 19 ರಂದು ಕಂಬಳ ಕ್ರೀಡೆ‌ ನಡೆಯಲಿದೆ. ಕಂಬಳ ಕ್ರೀಡೆಗೆ 130 ಜೋಡಿ ಕೋಣಗಳು ನೋಂದಣಿಯಾಗಿದೆ. ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆ ಸಮೀಪ ವಿಟಿಯು ಹತ್ತಿರದ ಜಾಗದಲ್ಲಿ ಸಿದ್ಧತೆ ನಡೆಯುತ್ತಿದೆ.

ಕೋಣಗಳ ಓಟದ ಗದ್ದೆ ಹದಗೊಳಿಸುವ ಕೆಲಸ ಆರಂಭವಾಗಿದೆ. ಕೋಣಗಳ ಓಟಕ್ಕಾಗಿ ಟ್ರ್ಯಾಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಿರೋಧದ ನಡುವೆಯೂ ಕ್ರೀಡಾ ಇಲಾಖೆ ಟ್ರ್ಯಾಕ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ 40ಕ್ಕೂ ಹೆಚ್ಚು ಮರಗಳನ್ನ ಕ್ರೀಡಾ ಇಲಾಖೆ ಕಡಿದಿದೆ.

ಕಂಬಳದ ವಿರುದ್ಧ ರೈತ ಸಂಘಟನೆಗಳು, ಪರಿಸವರದಿಗಳು ಪ್ರತಿಭಟಿಸಿದೆ. ಇದೀಗ ಕಂಬಳದ ಟ್ರ್ಯಾಕ್ ನಿರ್ಮಾಣದ ಕಾರ್ಯ ಆರಂಭವಾಗಿದೆ.
ಯಶಸ್ವಿ ಆಯೋಜನೆಗಾಗಿ ವಿವಿಧ ಕಂಬಳ ಸಮಿತಿಗಳ ಸಭೆ ನಡೆಸಿ ರೂಪುರೇಷೆ ಸಿದ್ಧತೆ ನಡೆಯುತ್ತಿದೆ.