ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರದ ಗಜಪಡೆಗೆ ನಿನ್ನೆ ತೂಕ ಪರೀಕ್ಷೆ ನಡೆಯಿತು. ಮೈಸೂರಿನ ಧ್ವನಂತರಿ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ನಡೆಯಿತು.
ಮೊದಲ ಹಂತದಲ್ಲಿ ಆಗಮಿಸಿದ್ದ 9ಆನೆಗಳಿಗೆ ತೂಕ ಪರೀಕ್ಷೆ ನಡೆಯಿತು. ಮಹೇಂದ್ರ :5490, ಲಕ್ಷ್ಮೀ : 3990, ಪ್ರಶಾಂತ : 5205, ಧನಂಜಯ :5530, ಶ್ರೀರಾಮ : 4820 ಕಾವೇರಿ: 3075, ಶ್ರೀಕಂಠ : 5790, ಏಕಲವ್ಯ : 5600, ಗೋಪಿ : 5170 ತೂಕ ಇತ್ತು. 9 ಆನೆಗಳ ಪೈಕಿ ತೂಕದಲ್ಲಿ ಶ್ರೀಕಂಠನಿಗೆ ಮೊದಲ ಸ್ಥಾನ ಇದೆ.

