ಮೈಸೂರು : ಅರಮನೆ ಬಲರಾಮ ದ್ವಾರದ ಮುಂಭಾಗ ಮಹಿಳೆಯರು ಹೊಡೆದಾಡಿರುವ ದೃಶ್ಯ ವೈರಲ್ ಆಗಿದೆ. ಪಾನಿಪುರಿ ತಿನ್ನುವ ವಿಚಾರದಲ್ಲಿ ಕಿರೀಕ್ ಶುರುವಾಗಿ ಜಡೆಗಳನ್ನ ಎಳೆದಾಡಿ ಹೊಡೆದಾಡಿದ್ದಾರೆ.
ಬಿಗ್ ಫೈಟ್ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಅರಮನೆ ನೋಡಲು ಬಂದಿದ್ದ ಮಹಿಳೆಯರು ಹೊಡೆದಾಟ ಇಳಿದಿದ್ದಾರೆ. ಹೊಡೆದಾಟ ಬಿಡಿಸಲು ಸ್ಥಳೀಯರು ಯತ್ನಿಸಿದರೂ ಲೆಕ್ಕಿಸದೆ ಹೊಡೆದಾಡಿಕೊಂಡಿದ್ದಾರೆ.

