ಮೈಸೂರು : ಕಾಡು ಪ್ರಾಣಿ ದಾಳಿ ಮೈಸೂರು ಜಿಲ್ಲೆಯಲ್ಲಿ ಮುಂದುವರಿದಿದೆ. ಹುಲಿ ದಾಳಿ ಹಸುವಿಗೆ ಗಾಯವಾಗಿರುವ ಘಟನೆ ಹುಣಸೂರು ತಾಲ್ಲೂಕು ನಂಜಾಪುರ ಗ್ರಾಮದಲ್ಲಿ ನಡೆದಿದೆ.
ರೈತ ಮುದ್ದೆಗೌಡರಿಗೆ ಸೇರಿದ ಹಸುವಾಗಿದ್ದು, ಹಸು ಮೇಯಿಸುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ್ದು, ಹುಲಿ ಕಂಡು ರೈತರು ಕೂಗಾಡಿದ್ದಾರೆ. ಕೂಗಾಟಕ್ಕೆ ಹೆದರಿ ಹಸು ಬಿಟ್ಟು ಹುಲಿ ಕಾಡಿಗೆ ಹೋಗಿದೆ.

