ಮೈಸೂರು : ಕಾಡು ಪ್ರಾಣಿಗಳ ದಾಳಿ ಮೈಸೂರಿನಲ್ಲಿ ಮುಂದುವರೆದಿದ್ದು, ಚಿರತೆ ದಾಳಿಗೆ ಗಬ್ಬದ ಮೇಕೆ ಬಲಿಯಾಗಿರುವ ಘಟನೆ ಗುಂಗ್ರಾಲ್ ಛತ್ರ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಾಗಣ್ಣ ಎಂಬುವರಿಗೆ ಸೇರಿದ ಮೇಕೆ ಇದಾಗಿದ್ದು, ವಾರದ ಅಂತರದಲ್ಲಿ ಮೂರು ಮೇಕೆ ಎರಡು ನಾಯಿಯನ್ನು ಚಿರತೆ ಭೇಟೆಯಾಡಿದೆ. ಹೊಸಕೋಟೆ, ಆನಂದೂರು ಕೊಪ್ಪಲು ಗ್ರಾಮದ ಸುತ್ತಮುತ್ತಲಿನಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಚಿರತೆ ದಾಳಿಯಿಂದ ಜನರು ಭಯಭೀತರಾಗಿದ್ದು, ಅರಣ್ಯ ಆಧಿಕಾರಿ ಭೇಟಿ ನೀಡಿ ಸ್ಥಳದಲ್ಲಿ ಬೋನ್ ಇಟ್ಟಿದ್ದಾರೆ.

