ಮೈಸೂರು: ಯದುವೀರ್ ಅವರನ್ನ ನಕಲಿ ಮಹಾರಾಜ ಎಂಬ ಲಕ್ಷ್ಮಣ್ ಹೇಳಿಕೆಗೆ ವಿಶ್ವನಾಥ್ ಕಿಡಿಕಾರಿದ್ದು, ಅದರಿಂದ ನಿಮಗೆ ಒಳ್ಳೆಯದು ಆಗಲ್ಲ. ಯದುವಂಶದ ಅರಸ ಬಗ್ಗೆ ನೀವು ಮಾತನಾಡಿ ನೀವು ಚೀಪ್ ಆಗ್ತೀರಾ ಹೊರತು ಅವರಿಗೇನು ಆಗಲ್ಲ. ಕೈ ನಾಯಕರ ವಿರುದ್ಧ ವಿಶ್ವನಾಥ್ ಕಿಡಿ ಕಾರಿದ್ದಾರೆ.
ಪ್ರಿನ್ಸಸ್ ರಸ್ತೆ ಬದಲಾವಣೆ ವಿಚಾರಕ್ಕೆ ಎಂಎಲ್ಸಿ ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಿನ್ಸಸ್ ಅಂತ ಏನಿದೆ ಅದೇ ಹೆಸರು ಇರಲಿ. ಅದಕ್ಕೆ ಎಲ್ಲಾ ರೀತಿಯ ದಾಖಲೆಗಳಿವೆ. ಅದನ್ನ ಬಿಟ್ಟು ನಿಮ್ಮ ಹೆಸರನ್ನ ಇಡಲಿಕ್ಕೆ ಹೋಗಿ. ನಿಮ್ಮ ಬೆಂಬಲಿಗರು ನಿಮ್ಮ ಹೆಸರನ್ನ ಕೆಡಿಸಲಿಕ್ಕೆ ಹೊರಟಿದ್ದಾರೆ.
ಇದು ಬೇಡ ಸಿದ್ದರಾಮಯ್ಯ ನವರೆ ನಿಮಗೆ ಜನ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ ಎಲ್ಲವನ್ನೂ ಅನುಭವಿಸಿದ್ದೀರಿ. ಈಗ ಈ ವಿಚಾರ ಇಲ್ಲಿಗೆ ಬಿಡಿ. ಸಿಎಂ ವಿರುದ್ಧ ಎಂಎಲ್ಸಿ ವಿಶ್ವನಾಥ್ ವಾಗ್ದಾಳಿ ನಡೆಸಿದರು.

