ಮೈಸೂರು: ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯಡಿ, ಅರಮನೆ ಮಂಡಳಿ ಸಾರ್ವಜನಿಕ ಮಾಹಿತಿ ಅಧಿಕಾರಿ ಟಿ.ಎಸ್ ಸುಬ್ರಹ್ಮಣ್ಯ ಗೆ 25 ಸಾವಿರ ದಂಡ ವಿಧಿಸಲಾಗಿದೆ.

ಮಾಹಿತಿ ಹಕ್ಕಿನಡಿ ವಕೀಲ ಸದಾನಂದ ಅರ್ಜಿ ಸಲ್ಲಿಸಿದ್ದರು. ಕಾಲಮಿತಿಯಲ್ಲಿ ಟಿ.ಎಸ್ ಸುಬ್ರಮಣ್ಯ ಮಾಹಿತಿ ನೀಡಲಿಲ್ಲ. ಈ ಹಿನ್ನಲೆ ವಕೀಲ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿ ವಿಚಾರಣೆಗೆ ಹಾಜರಾಗದ ಹಿನ್ನಲೆ ವಕೀಲ ಎರಡನೇ ಮನವಿ ಮಾಡಿದರು.

ಅರಮನೆ ಮಂಡಳಿ ಮಾಹಿತಿ ಹಕ್ಕಿನಡಿ ಬರಲ್ಲ ಎಂದು ಸುಬ್ರಮಣ್ಯ ಪರ ವಕೀಲ ವಾದ ಮಾಡಿದ್ದರು. ಅರಮನೆ ಮಂಡಳಿ ಮಾಹಿತಿ ಹಕ್ಕಿನಡಿ ಬರತ್ತೆ ಎಂದು ಆದೇಶ ನೀಡಿದ ರಾಜ್ಯ ಮಾಹಿತಿ ಆಯೋಗ
ಟಿಎಸ್ ಸುಬ್ರಹ್ಮಣ್ಯ 25 ಸಾವಿರ ದಂಡ ವಿಧಿಸಿದೆ. ವಕೀಲ ಸದಾನಂದಗೆ 50 ಸಾವಿರ ಪರಿಹಾರ ನೀಡುವಂತೆ ಆದೇಶ ಹೊರಡಿಸಲಾಗಿದೆ.