ಮೈಸೂರು: ದಸರಾದಲ್ಲಿ ಕಂಬಳ ಆಯೋಜನೆಗೆ ವಿರೋಧ ಮುಂದುವರೆದಿದೆ. ವಿವಿಧ ಕನ್ನಡ ಪರ ಸಂಘಟನೆಗಳಿಂದ ಕಂಬಳದ ನಿಯೋಜಿತ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ಎಂದು ಆಗ್ರಹಿಸಿದರು. ಪರಿಸರವಾದಿಗಳು ಕನ್ನಡ ಪರ ಹೋರಾಟಗಾರರು ವಿರೋದಿಸಿದ್ರು ಸರ್ವಧಿಕಾರಿಯಂತೆ ಕಂಬಳಕ್ಕೆ ಮುಂದಾಗಿದ್ದಾರೆ. ಎರಡು ದಿನದ ಕಂಬಳಕ್ಕೆ 9 ಕೋಟಿ ವ್ಯಯ ಮಾಡಲಾಗುತ್ತಿದೆ.
ಈ ಬದಲು ದಸರಾದಲ್ಲಿ ಪಾಲ್ಗೊಳ್ಳುವ ವಿವಿಧ ರಾಜ್ಯದ ಕಲಾವಿದರ ಗೌರವಧನ ಹೆಚ್ಚಿಸಿ. ಕಲಾವಿಧರಿಗೆ ಉತ್ತಮ ಊಟ ವಸತಿ ನೀಡಿ. ಜಿಲ್ಲಾಡಳಿತ ಮತ್ತು ಸರ್ಕಾರ ಕನ್ನಡ ಪರ ಸಂಘಟನೆಗಳ ಜೊತೆ ವಿಶ್ವಾಸದಿಂದ ದಸರಾ ಮಾಡಿ. ಈ ಕೂಡಲೇ ಕಂಬಳ ಆಯೋಜನೆ ಕೈಬಿಡಿ ಎಂದು ಸರ್ಕಾರಕ್ಕೆ ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

