ಮೈಸೂರು : ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಸಾರ್ವಜನಿಕರ ಆಕ್ರೋಶ ವಿಚಾರವಾಗಿ ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ವೈಜ್ಞಾನಿಕವಾಗಿಯೆ ಸಿಗ್ನಲ್ ಗಳನ್ನು ಹಾಕಲಾಗಿದೆ. ಮೈಸೂರು ಬೆಳವಣಿಗೆ ಆಧಾರದ ಮೇಲೆ ಸಿಗ್ನಲ್ ಹಾಕಿದ್ದೇವೆ. ಏನಾದ್ರೂ ಸಮಸ್ಯೆ ಆಗುತ್ತಿದ್ದರೆ ಸಿಗ್ನಲ್ ಲೈಟ್ ಪುನರ್ ಪರಿಶೀಲನೆ ನಡೆಸಿ ಎಂದು ಹೇಳುತ್ತೇನೆ. ನಗರದಲ್ಲಿ ವೈಟ್ ಟ್ಯಾಪಿಂಗ್ ಮಾಡಬೇಕಿದೆ. 12 ಕಿಲೋ ಮೀಟರ್ ವೈಟ್ ಟ್ಯಾಪಿಂಗ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

