ಮೈಸೂರು : ನಂಜನಗೂಡಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದರು. ಮನೆ ದೇವರು ನಂಜುಂಡೇಶ್ವರ ದರ್ಶನವನ್ನು ಕುಮಾರಸ್ವಾಮಿ ಪಡೆದರು.
ಪತ್ನಿ ಅನಿತಾ ಜೊತೆಗೂಡಿ ಕುಲ ದೇವರಿಗೆ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು. ನಂಜುಂಡೇಶ್ವರನಿಗೆ ಕುಮಾರಸ್ವಾಮಿ ತುಲಾಭಾರ ಹರಕೆ ತೀರಿಸಿದರು. ಬೆಲ್ಲದ ತುಲಾಭಾರ ಸೇವೆಯನ್ನು ಸಲ್ಲಿಸಿದರು.
ಕುಮಾರಸ್ವಾಮಿಗೆ ಜೆಡಿಎಸ್ ನಾಯಕರ ಸಾಥ್ ನೀಡಿದರು. ನಂಜನಗೂಡಿನಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಕುಮಾರಸ್ವಾಮಿ ತೆರಳಿದರು.

