ನಂಜನಗೂಡು: ಮಾಹಿತಿ ಪಡೆಯಲು ಬಂದ ಪೊಲೀಸ್ ಸಿಬ್ಬಂದಿ ಎದುರೇ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ತನ್ನ ಸೀರೆಯನ್ನ ಬಿಚ್ಚಿಹಾಕಿ ವಿಡಿಯೋ ತೆಗೆಯುವಂತೆ ಪ್ರೇರೇಪಣೆ ಮಾಡಿ ಅನುಚಿತವಾಗಿ ವರ್ತಿಸಿದ ಪ್ರಕರಣವೊಂದು ನಂಜನಗೂಡು ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ ಎಂಬಾಕೆ ಹೀಗೆ ಅನುಚಿತವಾಗಿ ವರ್ತಿಸಿದ ಮಹಿಳೆ. ಮಹಿಳೆಯ ವರ್ತನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಿರಮಳ್ಳಿ ಗ್ರಾಮದಲ್ಲಿ ರತ್ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ರತ್ನಮ್ಮ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೋವು ಹೇಳಿಕೊಂಡಿದ್ದರು. ಅಲ್ಲದೆ ಎಸ್ಪಿ ಕಛೇರಿಯಲ್ಲೂ ಸಹ ದೂರು ನೀಡಿದ್ದರು. ಈ ವಿಚಾರವಾಗಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಮಾಹಿತಿ ಪಡೆಯಲು ರತ್ನಮ್ಮ ಮನೆಗೆ ಭೇಟಿ ನೀಡಿದಾಗ ಹುಚ್ಚಾಟ ಪ್ರದರ್ಶಿಸಿದ್ದಾಳೆ.
ರತ್ನಮ್ಮ ವಿರುದ್ದವೂ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಮಾಹಿತಿ ಪಡೆಯಲು ತೆರಳಿದ ಪೊಲೀಸ್ ಗೆ ತನ್ನ ಬಟ್ಟೆ ಬಿಚ್ಚಿಹಾಕಿ ಆತನಜೊತೆ ಸೆಲ್ಫಿ ವಿಡಿಯೋ ಮಾಡಲು ಯತ್ನಿಸಿದ್ದಾಳೆ. ಪೊಲೀಸರ ಕರ್ತವ್ಯಕ್ಕೆ ಹೀಗೆ ಅನುಚಿತವಾಗಿ ವರ್ತಿಸುವ ಮೂಲಕ ಅಡ್ಡಿ ಪಡಿಸಿ ಬೆದರಿಕೆ ಹಾಕಿರುವ ಈ ಮಹಿಳೆಯ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.

