ಮೈಸೂರು: ಇಟ್ಟಿಗೆ ತಯಾರಿಸುವ ಯಂತ್ರ ಕೊಡುವುದಾಗಿ ನಂಬಿಸಿ ಕೇರಳಾ ರಾಜ್ಯದ ಉದ್ಯಮಿ ಮೈಸೂರಿನ ಸಿವಿಲ್ ಕಂಟ್ರಾಕ್ಟರ್ ಗೆ 25 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಮೈಸೂರಿನ ಆಲನಹಳ್ಳಿ ನಿವಾಸಿ ಗುರುರಾಜ್ ವಂಚನೆಗೆ ಒಳಗಾದವರು.ಕೇರಳಾ ರಾಜ್ಯದ ಎರ್ನಾಕುಲಂ ನ ಬಾಬು@ಬಾಬುಸೈಯದ್ ಆಲಿ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
2023 ರಲ್ಲಿ ಗುರುರಾಜ್ ರವರು ಇಟ್ಟಿಗೆ ಫ್ಯಾಕ್ಟರಿ ಪ್ರಾರಂಭಿಸುವ ಉದ್ದೇಶದಿಂದ ಯಂತ್ರ ಖರೀದಿಸಲು ಮುಂದಾದಾಗ ಬಾಬು ಪರಿಚಯವಾಗಿದ್ದಾರೆ. 60 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿದೆ. ಮುಂಗಡವಾಗಿ ಗುರುರಾಜ್ 25 ಲಕ್ಷ ಪಾವತಿಸಿದ್ದಾರೆ. ಹಣ ಪಡೆದ ಬಾಬು ಯಂತ್ರ ತಲುಪಿಸುವಲ್ಲಿ ವಿಳಂಬ ಮಾಡಿದ್ದಾರೆ.
ಗುರುರಾಜ್ ರವರು ತೀವ್ರ ಒತ್ತಡ ಹೇರಿದಾಗ ಯಂತ್ರದ ಮೇಲೆ ಬ್ಯಾಂಕ್ ಸಾಲ ಇದೆ ಎಂದು ಸಬೂಬುಗಳನ್ನ ಹೇಳಿಕೊಂಡು ವಂಚಿಸಿದ್ದಾರೆ.ಗುರುರಾಜ್ ರವರು ನ್ಯಾಯಲಯದ ಮೊರೆ ಹೋಗಿದ್ದಾರೆ.ನ್ಯಾಯಾಲಯದ ಆದೇಶದಂತೆ ಬಾಬು ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

