ನಂಜನಗೂಡು: ತಾಲ್ಲೂಕು ಕಛೇರಿಯಲ್ಲಿ ಅನಧಿಕೃತವಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮಾತನಾಡಿ, ಸೂರಹಳ್ಳಿ ಗ್ರಾಮದ ವಿಚಾರವಾಗಿ ಪ್ರತಿಭಟನೆ ಮಾಡಿರುವ ಕಾರಣ. ಸೂರಹಳ್ಳಿ ಗ್ರಾಮದ ಸರ್ವೆ ನಂ.269 ರಲ್ಲಿ ಮೂಲತಃ ಸರ್ಕಾರಿ ಕರಾಬು ಎಂದು ಬರುತ್ತಿತ್ತು. ಅಧಿಕೃತವಾಗಿ ಕಂದಾಯ ಇಲಾಖೆಯಿಂದ ಪರಿಗಣಿಸಿ ಗೋಮಾಳ ಎಂದು ಮಾಡಲಾಗಿದೆ.
ಸುಮಾರು 315 ಎಕರೆ ಪ್ರದೇಶದಲ್ಲಿ 1960 ರಲ್ಲಿಯೇ ವಿಸ್ತೀರ್ಣ 100 ಎಕರೆಯನ್ನು 65 ರೈತರಿಗೆ ಸಾಗುವಳಿ ನೀಡಲಾಗಿದೆ. ಇದರಲ್ಲಿ ಗೋಮಾಳಕ್ಕಾಗಿ ನಾವು 30 ಎಕರೆಯನ್ನು ಕಾಯ್ದಿರಿಸಿಕೊಳ್ಳಬೇಕು. ಸೂರಹಳ್ಳಿ ಗ್ರಾಮದಲ್ಲಿ 2500 ಜಾನುವಾರುಗಳ ಸಂಖ್ಯೆ ಇದೆ. ಇದರ ಪ್ರಕಾರವಾಗಿ ಗೋಮಾಳಕ್ಕಾಗಿ 780 ಎಕರೆ ಇರಬೇಕು. ಆದರೆ, ಕಡಿಮೆ ಇದೆ.
ಇನ್ನೂಳಿದ ಪ್ರದೇಶಕ್ಕೆ ಸಾಗುವಳಿ ಪತ್ರ ನೀಡುವಂತೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ರೈತರು ನೀಡಿದ್ದ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ. ಇದನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಸರ್ಕಾರಿ ಕಛೇರಿಯಲ್ಲಿ ಪ್ರತಿಭಟನೆ ಮಾಡಬೇಕಾದರೆ ನಿಗದಿತವಾಗಿ ಮಾಡಬೇಕು. ನಮ್ಮ ಸಿಬ್ಬಂದಿಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶೌಚಾಲಯಕ್ಕೂ ಹೋಗಲು ಕಷ್ಟವಾಗಿತ್ತು. ಹಾಗೆಯೇ ತುಂಬಾ ತೊಂದೆಯಾಗಿರುವುದು ಕಂಡು ಬಂದಿದೆ. ಇಂದು ಕೋರ್ಟ್ ನಡೆಸಲಾಗುತ್ತಿತ್ತು ಆ ಬಾಗಿಲನ್ನು ಬಂದ್ ಮಾಡಿದ್ದಾರೆ. ಇದು ಮಾಡಿರುವುದು ತಪ್ಪು. ಹಾಗಾಗಿ ಪ್ರತಿಭಟನೆ ನಡೆಸಿರುವವರ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದರು.

