ಮೈಸೂರು: ನಿಗದಿತ ದರ ಪಡೆಯದೆ ದುಪ್ಪಟ್ಟು ಹಣದ ಬೇಡಿಕೆ ಇಟ್ಟು ನಿಗದಿತ ಸ್ಥಳಕ್ಕೆ ಕರೆದೊಯ್ಯದ ಆಟೋ ಚಾಲಕನ ಉಡಾಫೆ ವರ್ತನೆಗೆ ಪ್ರಾಣಿಕರು ಕಿರಿಕಿರಿಗೊಳಗಾದ ಘಟನೆಯೊಂದು ಬೆಳಕಿಗೆ ಬಂದಿದೆ.

ಆಟೋ ಚಾಲಕನ ದುರ್ವರ್ತನೆಯನ್ನ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.ನವೆಂಬರ್ 17 ರಂದು ಸಂಜೆ 7.37 ರಲ್ಲಿ ಬೋಗಾದಿಯ ರಾಜರಾಜೇಶ್ವರಿ ನಗರದಿಂದ ಪ್ರೀಮಿಯರ್ ಸ್ಟುಡಿಯೋ ಬಳಿಗೆ ಬರಲು UBER ಆಟೋ ಬುಕ್ ಮಾಡಿದ್ದಾರೆ.

KA09AB2028 ನೊಂದಣಿ ಸಂಖ್ಯೆಯ ಆಟೋ ಅಧಿಕೃತವಾಗಿ ಬುಕ್ ಆಗಿ ಬಂದಿದೆ.ಆಪ್ ನಲ್ಲಿ ಬಂದ ಮೆಸೇಜ್ ನಲ್ಲಿ 32 ರೂ ಪಾವತಿಸುವಂತೆ ಸೂಚಿಸಿದೆ. ಪ್ರಯಾಣಿಕರನ್ನ ಹತ್ತಿಸಿಕೊಂಡ ಚಾಲಕ 70 ರೂ ಗೆ ಡಿಮ್ಯಾಂಡ್ ಮಾಡಿದ್ದಾನೆ. ಮೆಸೇಜ್ ನಲ್ಲಿ ಸೂಚಿಸಿದ ಹಣವನ್ನ ಪಾವತಿಸುವುದಾಗಿ ತಿಳಿಸಿದ ಪ್ರಯಾಣಿಕರಿಗೆ ದುಪ್ಪಟ್ಟು ಶುಲ್ಕ ನೀಡಲೇಬೇಕೆಂದು ಒತ್ತಾಯಿಸಿದ್ದಾನೆ.

ಈ ಸಂಬಂಧ UBER ಗೆ ಸಂಪರ್ಕಿಸಿ ದೂರು ನೀಡಿದರೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. 112 ಗೆ ಫೋನ್ ಮಾಡುವುದಾಗಿ ತಿಳಿಸಿದರೂ ಡೋಂಟ್ ಕೇರ್ ಎಂದು ಉಡಾಫೆಯಾಗಿ ವರ್ತಿಸಿದ್ದಾನೆ. ಆಟೋ ನಿಲ್ಲಿಸುವಂತೆ ಮನವಿ ಮಾಡಿದರೂ ನಿಗದಿತ ಸ್ಥಳಕ್ಕೆ ಕರೆದೊಯ್ಯದೆ ಮತ್ತೊಂದು ಸ್ಥಳಕ್ಕೆ ಬಲವಂತವಾಗಿ ಕರೆದೊಯ್ದು ಅನುಚಿತವಾಗಿ ವರ್ತಿಸಿದ್ದಾನೆ. ಆಟೋ ಚಾಲಕನ ಬೇಜವಾಬ್ದಾರಿ ವರ್ತನೆಯನ್ನ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.