ಮೈಸೂರು: ಈಜಲು ಹೋಗಿದ್ದ ಇಬ್ಬರು ಬಾಲ್ಯ ಸ್ನೇಹಿತರು ನೀರುಪಾಲಾಗಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಮ್‌ಪೂರವಾಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶರಣಪ್ಪ ಹಾಳಗೋರ್ಟೆ (10), ಮೈಲಾರಿ ದೊಡಮನಿ (11) ಮೃತ ದುರ್ದೈವಿಗಳು. ಶಾಲೆಗೆ ರಜೆ ಇರುವ ಹಿನ್ನೆಲೆ ನೀರಿನ ಹೊಂಡಕ್ಕೆ ಈಜಲು  ಸ್ನೇಹಿತರು ಹೋಗಿದ್ದರು. ಈ ವೇಳೆ ಹೊಂಡದಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕರ ಸಾವಿನ ಸುದ್ದಿ ತಿಳಿದು  ಕುಟುಂಬಸ್ಥರು ಆಘಾತಕ್ಕೆ ಒಳಗಾದರು. ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿ ಮೃತ ಬಾಲಕರ ಕುಟುಂಬಸ್ಥರಿಗೆ  ಶಾಸಕ ಡಾ.ಸಿದ್ದು ಪಾಟೀಲ್ ಸಾಂತ್ವನ ಹೇಳಿದರು.