ನಂಜನಗೂಡು: ಸಿಸಿ ಟಿವಿ ದೃಶ್ಯಗಳು ನೀಡಿದ ಸುಳಿವಿನ ಆಧಾರದ ಮೇಲೆ ನಂಜನಗೂಡು ಟೌನ್ ಪೊಲೀಸರು ಇಬ್ಬರು ಜಾನುವಾರುಗಳ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಕೆಸರೆ ನಿವಾಸಿಗಳಾದ ಸುಲೇಮಾನ್ ಹಾಗೂ ಸಿದ್ದಿಖ್ ಪಾಷಾ ಬಂಧಿತರು. ಕೃತ್ಯದಲ್ಲಿ ಭಾಗಿಯಾದ ಉಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ನಂಜನಗೂಡಿನ ಒಕ್ಕಲಗೇರಿಯಲ್ಲಿ ಇತ್ತೀಚೆಗೆ 5 ಜಾನುವಾರುಗಳು ಕಳುವಾಗಿತ್ತು.ರಾತ್ರೋ ರಾತ್ರಿ ಜಾನುವಾರುಗಳು ಮಾಯವಾಗಿತ್ತು.ಈ ಕುರಿತಂತೆ ನಂಜನಗೂಡು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿ ಟಿವಿ ಹಾಗೂ ವೈಜ್ಞಾನಿಕ ಸಾಕ್ಷಾಧಾರಗಳ ಮೇಲೆ ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಇಬ್ಬರು ಖದೀಮರು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳ ಬಂಧನದಿಂದ ನಂಜನಗೂಡು, ಹೆಚ್.ಡಿ.ಕೋಟೆ, ಟಿ.ನರಸೀಪುರ, ಬಿಳಿಗೆರೆ ಹಾಗೂ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರುಗಳು ಕಳುವಾದ ಪ್ರಕರಣಗಳು ಪತ್ತೆಯಾದಂತಾಗಿದೆ.

ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರಘು ರವರ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ಎಎಸ್ಸೈ ಸತೀಶ್, ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ಅಶೋಕ್, ಭಾಸ್ಕರ್, ಶಿವಕುಮಾರ್, ಮಹೇಶ್, ತಿಮ್ಮಯ್ಯ,ಚೇತನ್, ಕೃಷ್ಣ ಹಾಗೂ ವಸಂತ್ ಕುಮಾರ್ ರವರು ಕಾರ್ಯಾಚರಣೆಯನ್ನ ನಡೆಸಿ ಯಶಸ್ವಿಯಾಗಿದ್ದಾರೆ.