ಮೈಸೂರು: ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗೋಷ್ಟಿ ನಡೆಸಿ ರಾಜ್ಯ ಸರ್ಕಾರ ವಿಶೇಷವಾಗಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದೆ. 5 ಗ್ಯಾರೆಂಟಿಯಲ್ಲಿ 5 ವರ್ಷ ಕಳೆಯಬೇಕು ಅಂತಿದ್ರು, 3 ವರ್ಷಕ್ಕೆ ಮುಕ್ತಾಯವಾಗುವ ಲಕ್ಷಣ ಕಾಣಿಸುತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಗ್ಯಾರೆಂಟಿಗಳು ಸರಿಯಾಗಿ ಜನರಿಗೆ ತಲುಪಲಿಲ್ಲ. ಗೃಹಲಕ್ಷ್ಮಿ 5 ಸಾವಿರ ಕೋಟಿ ಹಣ ಎಲ್ಲಿಗೆ ಹೋಯಿತು ಗೊತ್ತಿಲ್ಲ. ಸಚಿವರು ಕಣ್ಣೀರು ಹಾಕಿದ್ರು ಆದ್ರೆ ಏನು ಪ್ರಯೋಜನ ಆಗಲಿಲ್ಲ. ಮತ್ತೆ 3 ತಿಂಗಳು ಕಳೆದರು ಗೃಹಲಕ್ಷ್ಮಿ ಹಣ ಜನರಿಗೆ ಕೊಟ್ಟಿಲ್ಲ ಎಂದರು.

ಮೋದಿ ಅವರೇ 2 ತಿಂಗಳಿಂದ 10ಕೆಜಿ ಅಕ್ಕಿ ಕೊಡ್ತಿದ್ದಾರೆ. ರಾಜ್ಯ ಸರ್ಕಾರದಿಂದ ಅಕ್ಕಿ ಯಾಕೆ ಕೊಡ್ತಿಲ್ಲ ಅಂದ್ರೆ ಮಾಧ್ಯಮದವರನ್ನು ಗದರಿಸುವ ಕೆಲ್ಸ ಮುನಿಯಪ್ಪ ಮಾಡಿದರು. ಪರಿಶಿಷ್ಟ ಜನಾಂಗಕ್ಕೆ ಕೊಡಬೇಕಿದ್ದ ಹಣ ಕೊಟ್ಟಿಲ್ಲ. ದಲಿತರ ಹಣಕ್ಕೆ ಕನ್ನ ಹಾಕಿದ್ದೀರಾ. ರಾಜ್ಯ ಸರ್ಕಾರ ಅನೇಕ ತಪ್ಪುಗಳನ್ನು ಮಾಡಿದೆ. ದಲಿತರ ಹಣ ದೋಖಾ ಮಾಡಿದೆ ಎಂದರು.

ಸಿಎಂ ಸಿದ್ದರಾಮಯ್ಯ ಸರ್ಕಾರ ಅನ್ಯಾಯ ಮಾಡಿದೆ. ದಲಿತರ ಮಕ್ಕಳ ಅನ್ನವನ್ನು ಕಿತ್ತುಕೊಳ್ಳುವ ಕೆಲಸ ಈ ಸರ್ಕಾರ ಮಾಡ್ತಿದೆ. ಹಾಸ್ಟೆಲ್ ಗಳಲ್ಲಿ ದವಸ ಧಾನ್ಯ ಕೊಡ್ತಿಲ್ಲ, ದಲಿತರ ಸಂಕಷ್ಟ ಹೆಚ್.ಸಿ ಮಹದೇವಪ್ಪ ಅವರಿಗೆ ಕಾಣಿಸುತ್ತಿಲ್ವಾ?, ಮಹದೇವಪ್ಪಗೆ ಸಮಾಜ ಕಲ್ಯಾಣ ಇಲಾಖೆ ನಿಭಾಯಿಸೋಕೆ ಆಗ್ತಾ ಇಲ್ಲ. ಒಳಮೀಸಲಾತಿಯಲ್ಲಿ ಕೂಡ ಅನ್ಯಾಯ ಮಾಡಿದ್ರು ಎಂದರು.

ರೋಸ್ಟರ್ ಬಿಂದುಗಳನ್ನು ಸರ್ಕಾರ ಸರಿ ಮಾಡಿಲ್ಲ. ವಿದ್ಯಾವಂತ ಯುವಕರು ಬೀದಿ ಪಾಲಾಗುತ್ತಿದ್ದಾರೆ. ಒಳಮೀಸಲಾತಿ ಆದ್ಮೇಲೆ ಸಾಕಷ್ಟು ಗೊಂದಲ ಆಗಿದೆ
ಜಾತಿಯನ್ನು ಹೋಗಲಾಡಿಸುವ ಕಾಲದಲ್ಲಿ ಮತ್ತೆ ಜಾತಿ ಜಾತಿ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ಎಲ್ಲ ಗೊಂದಲಗಳಿಗೆ ಹೆಚ್.ಸಿ ಮಹದೇವಪ್ಪ ನೇರ ಕಾರಣ ಎಂದು ಸಚಿವ ಹೆಚ್.ಸಿ ಮಹದೇವಪ್ಪ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.