ಮೈಸೂರು : ಸಾರಿಗೆ ಬಸ್ ಪಲ್ಟಿಯಾಗಿ ಬಸ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಬನ್ನೂರು ಮುಖ್ಯ ರಸ್ತೆಯ ಮಾದೇಗೌಡನ ಹುಂಡಿ ಬಳಿ ನಡೆದಿದೆ.
ಸ್ಥಳೀಯರ ಸಹಕಾರದಿಂದ ಬಸ್ ನಲ್ಲಿದ್ದ ಪ್ರಯಾಣಿಕರ ರಕ್ಷಣೆ ಮಾಡಲಾಯಿತು. ಮಳವಳ್ಳಿಯಿಂದ ಮೈಸೂರಿಗೆ ಬಸ್ ಬರುತ್ತಿದ್ದ ವೇಳೆ ಅವಘಢ ಸಂಭವಿಸಿದೆ. ಮೈಸೂರಿನ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

