ಮೈಸೂರು : ಹುಲಿ ಕಾಟ ಮೈಸೂರಿನಲ್ಲಿ ಮುಂದುವರೆದಿದ್ದು, ಕಾಡು ವಡ್ಡರಗೂಡಿಯಲ್ಲಿ ಪ್ರತ್ಯಕ್ಷವಾಗಿದೆ. ಜಮೀನಿನಲ್ಲಿ ಹುಲಿ ಹೆಜ್ಜೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಗ್ರಾಮದ ಸುತ್ತುಮುತ್ತ ಹುಲಿ ಓಡಾಡಿದೆ. ಕೃಷಿ ಚಟುವಟಿಕೆಗೆ ತೆರಳಲು ರೈತರಲ್ಲಿ ಆತಂಕ ಮನೆ ಮಾಡಿದೆ. ಹುಣಸೂರು ತಾಲ್ಲೂಕಿನ ಗದ್ದಿಗೆ ಸಮೀಪದ ಕಾಡು ವಡ್ಡರಗೂಡಿ ಗ್ರಾಮದಲ್ಲಿ ರೈತ ಧನಗಹಳ್ಳಿ ಕೆಂಡಗಣ್ಣಪ್ಪ ಎಂಬುವರ ಜಮೀನಿನಲ್ಲಿ ಹುಲಿ  ಓಡಾಡಿದೆ.

ಹುಲಿ ಓಡಾಟ ಗುರುತು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಗೆ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.