ಮೈಸೂರು : ಜಮೀನಿನಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡು  ಗ್ರಾಮಸ್ಥರು ಗಾಬರಿಗೊಂಡಿರುವ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಗಣೇಶನಗುಡಿ ಸಮೀಪ ತಾರಕ ನಾಲೆ ಬಳಿ ನಡೆದಿದೆ.

ಎಂ.ಜಿ.ರಾಮಕೃಷ್ಣಪ್ಪ ಅವರ ಇಟ್ಟಿಗೆ ಫ್ಯಾಕ್ಟರಿ, ನಿವೃತ್ತ ಶಿಕ್ಷಕ ಚಿಕ್ಕಣ್ಣಯ್ಯ ಅವರ ಮನೆ ಹಿಂಭಾಗ ಜಮೀನಿನ ಬಳಿ ಹುಲಿ ಓಡಾಟ ಮಾಡಿದೆ. ಹುಲಿ ಪ್ರತ್ಯಕ್ಷ ಹಿನ್ನಲೆ ಸಾರ್ವಜನಿಕರು  ಭಯಗೊಂಡಿದ್ದಾರೆ.

ಹೆಚ್.ಡಿ.ಕೋಟೆ RFO ರವಿಕುಮಾರ್ ನೇತೃತ್ವದ ಹುಲಿ ಸೆರೆ ಕಾರ್ಯಚರಣೆ ನಡೆಯಿತ್ತಿದೆ. ಹುಲಿ ಪ್ರತ್ಯಕ್ಷ ಹಿನ್ನಲೆ ಅಕ್ಕಪಕ್ಕದ ಗ್ರಾಮಸ್ಥರಿಗೆ ಹೊರಗೆ ಓಡಾಡದಂತೆ ಮನವಿ ಮಾಡಲಾಗಿದೆ.