ಮೈಸೂರು: ಹುಲಿ ಮೃತದೇಹ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ನಾಗರಹೊಳೆ‌ ಉದ್ಯಾನದಂಚಿನ ಮುದ್ದನಹಳ್ಳಿ ಅರಣ್ಯದಲ್ಲಿ ಶವ ಪತ್ತೆಯಾಗಿದೆ.

ವಾರದ ಹಿಂದೆ ಈ ಭಾಗದ ಅರಣ್ಯದಲ್ಲಿ ವೆಂಕಟೇಶರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು. ಹುಲಿ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ. ಹುಲಿ ಶವದ ಬಳಿ ರಕ್ತ ಮಿಶ್ರಿತ ಹುಲಿ ಮಲ ಪತ್ತೆಯಾಗಿದೆ.

ಹಿಂಗಾಲಿಗೆ ಗಾಯವಾಗಿರುವ ಸ್ಥಿತಿಯಲ್ಲಿ ಹುಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ನಾಗರಹೊಳೆ ಹೊಳೆ ಉದ್ಯಾನದ ನಿರ್ದೆಶಕಿ ಪಿ.ಎ.ಸೀಮಾ. ಆರ್.ಎಫ್. ಒ. ಸುಬ್ರಮಣಿ ಭೇಟಿ ನೀಡಿದ್ದಾರೆ. ಪಶುವೈದ್ಯ ಡಾ.ರಮೇಶ್ ಹಾಗೂ ಹನಗೋಡು ಪಶು ಆಸ್ಪತ್ರೆ ವೈದ್ಯರಿಂದ‌ ಪರಿಶೀಲನೆ ನಡೆಸಲಾಗುತ್ತದೆ.