ಮೈಸೂರು : ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಆಗಿದೆ. ಇದು ಎಲ್ಲರಿಗೂ ಸಂತಸದ ಸಂದರ್ಭ. 2024ರಲ್ಲಿ ರಾಮಲಲ್ಲಾ ಗರ್ಭಗುಡಿ ಪೂರ್ಣಗೊಂಡಿತ್ತು. ಈಗ ಸಂಪೂರ್ಣವಾಗಿ ರಾಮ ಮಂದಿರ ಆಗಿದೆ. ನಿನ್ನೆ ಪ್ರಧಾನಿಗಳು ಧರ್ಮ ಧ್ವಜಾರೋಹಣ ಮಾಡಿದ್ದಾರೆ. ನನಗೆ ರಾಮಲಲ್ಲಾ ಮೂರ್ತಿಯ ಕೆತ್ತನೆಯ ಅವಕಾಶ ಸಿಕ್ಕಿತ್ತು. ಇದು ನನ್ನ ಪುಣ್ಯ ಎಂದು  ಅರುಣ್ ಯೋಗಿರಾಜ್ ಹೇಳಿದರು.

ಪುರಿ ಜಗನ್ನಾಥ ಮಂದಿರದಲ್ಲೂ ಧ್ವಜಾರೋಹಣ ಆಗುತ್ತೆ ಅದೇ ರೀತಿ ಶ್ರೀರಾಮ ಮಂದಿರದಲ್ಲೂ ಆಗಿದೆ. ಮುಂದಿನ ಪೀಳಿಗೆಗೂ 21 ನೇ ಶತಮಾನದಲ್ಲಿ ರಾಮ ಮಂದಿರ  ಹೇಗಿದೆ ಅಂತಾ ತಿಳಿಯುತ್ತೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಾವಿರಾರು ಶಿಲ್ಪಿಗಳು ಶ್ರಮಿಸಿದ್ದಾರೆ. ರಾಮ ಭಕ್ತರು ಈ ಕ್ಷಣಕ್ಕಾಗಿ ಕಾಯುತ್ತಿದ್ದರು ಎಂದರು.

ಅಂತಿಮವಾಗಿ ಎಲ್ಲಾ ಕಾರ್ಯಗಳು ಮುಕ್ತಾಯಗೊಂಡಿವೆ. ಶ್ರೀರಾಮಲಲ್ಲಾ ಮಂದಿರಕ್ಕಾಗಿ ಶ್ರಮಿಸಿದ ಎಲ್ಲಾ ರಾಮ ಭಕ್ತರಿಗೂ ನನ್ನ ಧನ್ಯವಾದಗಳು ಎಂದು ಮೈಸೂರಿನಲ್ಲಿ ಶ್ರೀರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.