ಮೈಸೂರು: ಭಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರವಾಗಿ ಮೈಸೂರಿನಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಚಾಮುಂಡಿ ತಾಯಿಗೆ ಹೂವ ಹಾಕೋರು ಸನಾತನಿಗಳು ಆಗಿರಬೇಕು.

ಮೂರ್ತಿ ಪೂಜೆ ಮಾಡಲ್ಲ ಅಂತ ವಿರೋಧಿಸುವವರಿಂದ ದಸರಾ ಉದ್ಘಾಟನೆ ಸರಿಯಲ್ಲ ಎಂದರು. ಅವರು ಬೇಕಾದ್ರೆ ಬೇರೆ ಬೇರೆ ಕಾರ್ಯಕ್ರಮ ಉದ್ಘಾಟನೆ ಮಾಡಲಿ.

ಈ ಬಗ್ಗೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಏನು ಹೇಳ್ತಾರೆ. ಮೂರ್ತಿ ಪೂಜೆ ಒಪ್ಪುತ್ತಾರಾ?, ಸಿದ್ದರಾಮಯ್ಯ ರಾಜಕೀಯ ಅಂತ್ಯ ಚಾಮುಂಡಿ ಬೆಟ್ಟದಿಂದಲೇ ಆಗತ್ತೆ ಎಂದರು.