ಮೈಸೂರು: ಈ ಬಾರಿಯ ದಸರಾ ಅದ್ವಾನ ವಿಚಾರವಾಗಿ ರಾಜವಂಶಸ್ಥ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಈ ಬಾರಿ ಸಾಕಷ್ಟು ಸಮಸ್ಯೆಗಳಾದವು. ಈಗ ನಾನು ಸುಮ್ನನೆ ವಿರೋಧ ಮಾಡಲ್ಲ. ಅದರ ಬಗ್ಗೆ ನಾನು ಇಲ್ಲಿ ಏನೂ ಹೇಳಲ್ಲ. ಚರ್ಚೆ ಮಾಡಲಿಕ್ಕೆ ಬಹಳಷ್ಟು ಇದೆ ಎಂದರು.
ಜಟ್ಟಿ ಕಾಳಗದ ಬಗ್ಗೆ ಏನಾಯಿತು ಅಂತ ನಮಗೆ ಗೊತ್ತಾಗಲಿಲ್ಲ. ನಾವು ಅರಮನೆ ಒಳಗಡೆ ಇದ್ದೆವು. ಪೊಲೀಸ್ ಮತ್ತು ಜಟ್ಟಿಗಳ ನಡುವೆ ಏನು ನಡೆದಿದೆ ಅಂತಾನೂ ಗೊತ್ತಾಗಿಲ್ಲ. ವಿಜಯ ಯಾತ್ರೆಗೆ ಕೊಟ್ಟಿರುವ ಲಗ್ನ ಮುಹೂರ್ತ ಮೀರುತ್ತಿತ್ತು ಅದಕ್ಕೆ ನಾವು ಹೊರಟು ಬಿಟ್ಟೆವು ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದಾರೆ.

